ನವದೆಹಲಿ:ನವೆಂಬರ್ 19ರಂದು ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿರುವ ಬೆನ್ನಲ್ಲೇ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (Bureau of Civil Aviation Security-BCAS) ಅರ್ಲಟ್ ಆಗಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿರುವ ವಿಮಾನ ನಿಲ್ದಾಣಗಳಿಗೆ ಸಂದರ್ಶಕರಿಗೆ ವಿಮಾನ ನಿಲ್ದಾಣ ಪ್ರವೇಶ ಪಾಸ್‌ಗಳನ್ನು ನೀಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.
ಸೋಮವಾರ ಸಂಜೆ ಬಿಸಿಎಎಸ್ ಹೊರಡಿಸಿದ ಆದೇಶದ ಪ್ರಕಾರ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೆ ಭೇಟಿ ನೀಡುವವರ ತಾತ್ಕಾಲಿಕ ವಿಮಾನ ನಿಲ್ದಾಣ ಪ್ರವೇಶ ಪಾಸ್ನ (Temporary Airport Entry Pass - TAEP) ಪ್ರವೇಶ ಮತ್ತು ಸಂದರ್ಶಕರ ಪ್ರವೇಶ ಟಿಕೆಟ್‌ಗಳ ಮಾರಾಟವನ್ನು ನವೆಂಬರ್ 30ರವರೆಗೆ ನಿಷೇಧಿಸಲಾಗಿದೆ.
ಮುಂದುವರೆದು, ವಿಮಾನ ನಿಲ್ದಾಣಗಳು, ಏರ್‌ಸ್ಟ್ರಿಪ್‌ಗಳು, ಏರ್‌ಫೀಲ್ಡ್‌ಗಳು, ಏರ್‌ಫೋರ್ಸ್ ಸ್ಟೇಷನ್‌ಗಳು, ಹೆಲಿಪ್ಯಾಡ್‌ಗಳು, ತರಬೇತಿ ಶಾಲೆಗಳು ಮತ್ತು ವಾಯುಯಾನ ತರಬೇತಿ ಸಂಸ್ಥೆಗಳಂತಹ ಅಖಿಲ ಭಾರತ ವಿಮಾನ ನಿಲ್ದಾಣದ ಮೇಲೆ ನಾಗರಿಕ ವಿಮಾನಯಾನ ಸ್ಥಾಪನೆಗಳಿಗೆ ಬೆದರಿಕೆಯ ಕುರಿತು ಕೇಂದ್ರ ಏಜೆನ್ಸಿಗಳಿಂದ ನಿರಂತರ ಬೆದರಿಕೆ ಸಂದೇಶಗಳನ್ನು ಹಂಚಿಕೊಳ್ಳಲಾಗಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭದ್ರತಾ ಪ್ರಾಧಿಕಾರ ತಿಳಿಸಿದೆ.
ಇದರೊಂದಿಗೆ ದೆಹಲಿ ಮತ್ತು ಪಂಜಾಬ್ ವಿಮಾನ ನಿಲ್ದಾಣದಿಂದ ಏರ್ ಇಂಡಿಯನ್ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ನವೆಂಬರ್ 30ರವರೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾದ ಸಂದರ್ಶಕರ ಪ್ರವೇಶ ಟಿಕೆಟ್‌ಗಳ ವಿತರಣೆ ಹೊರತುಪಡಿಸಿ ಹೆಚ್ಚುವರಿ ಭದ್ರತಾ ತಪಾಸಣೆಗೆ ಒಳಪಡುತ್ತಾರೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಂಸ್ಥೆಯು ಕಡ್ಡಾಯವಾಗಿ ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್ (Secondary Ladder Point Check - SLPC) ಹೊಂದಿರಬೇಕು. ಇಂದಿರಾ ಗಾಂಧಿ ಐಜಿಐ ವಿಮಾನ ನಿಲ್ದಾಣ ಮತ್ತು ಪಂಜಾಬ್‌ನ ವಿಮಾನ ನಿಲ್ದಾಣಗಳಲ್ಲಿ ಎಲ್ಲ ಏರ್ ಇಂಡಿಯಾ ವಿಮಾನಗಳಿಗೆ ಶೇ.100ರಷ್ಟು ಪಾಯಿಂಟ್ ಚೆಕ್ ಇರಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ನವೆಂಬರ್ 4ರಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಈ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿದೆ. ನವೆಂಬರ್ 19ರಂದು ಏರ್ ಇಂಡಿಯಾ ವಿಮಾನಗಳನ್ನು ಹತ್ತುವುದನ್ನು ತಪ್ಪಿಸುವಂತೆ ಸಿಖ್ಖರನ್ನು ಕೇಳಿಕೊಂಡಿದ್ದಾನೆ. ಆ ದಿನದಂದು ಏರ್ ಇಂಡಿಯಾ ವಿಮಾನವನ್ನು ವಿಶ್ವದಾದ್ಯಂತ ಎಲ್ಲಿಯೂ ಹಾರಲು ಬಿಡುವುದಿಲ್ಲ ಎಂದು ಪನ್ನು ಎಚ್ಚರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನವೆಂಬರ್ 19 ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನವಾಗಿದೆ. ಜೊತೆಗೆ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವೂ ಇದೆ.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್ ಫೈನಲ್ ದಿನ ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಸಿಖ್ ಪ್ರತ್ಯೇಕತಾವಾದಿ ಪನ್ನು ಬೆದರಿಕೆ