ಅಹಮದಾಬಾದ್ (ಗುಜರಾತ್): ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬೆಲೆಯನ್ನು ಕೆ.ಜಿಗೆ ರೂ.8.13 ಮತ್ತು ಪೈಪ್ಡ್ ಅಡುಗೆ ಅನಿಲ (ಪಿಎನ್‌ಜಿ) ಬೆಲೆಯನ್ನು ರೂ 5.06 ವರೆಗೆ ಕಡಿತಗೊಳಿಸಿದೆ. ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡ ನಿಗದಿಪಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಭಾರತ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿದೆ. ಈ ಬೆಳವಣಿಗೆಯಿಂದ ಮನೆಗಳಲ್ಲಿ ಬಳಕೆಯಾಗುವ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಕೆಯಾಗುವ ಸಿಎನ್‌ಜಿ ಬೆಲೆ ಕಡಿಮೆ ಮಾಡಲಾಗಿದೆ ಎಂದು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರಿಗೆ ಆದ್ಯತೆ ನೀಡುವ ನಮ್ಮ ನೀತಿಗೆ ಅನುಗುಣವಾಗಿ ಭಾರತ ಸರ್ಕಾರವು ಘೋಷಿಸಿದ ಹೊಸ ಗ್ಯಾಸ್ ಬೆಲೆ ಮಾರ್ಗಸೂಚಿಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯ ಪಿಎನ್‌ಜಿ ಮತ್ತು ಸಿಎನ್‌ಜಿ ಗ್ರಾಹಕರಿಗೆ ನೀಡಲು ರವಾನಿಸಲು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ನಿರ್ಧರಿಸಿದೆ. ಪೆಟ್ರೋಲ್ ಬೆಲೆಗಳಿಗೆ ಹೋಲಿಸಿದರೆ ಸಿಎನ್‌ಜಿ ಗ್ರಾಹಕರಿಗೆ ಶೇ 40 ಕ್ಕಿಂತ ಹೆಚ್ಚು ಉಳಿತಾಯ ಮತ್ತು ಎಲ್‌ಪಿಜಿ ಬೆಲೆಗಳಿಗೆ ಹೋಲಿಸಿದರೆ ಪಿಎನ್‌ಜಿ ಗ್ರಾಹಕರಿಗೆ ಸುಮಾರು ಶೇ 15 ರಷ್ಟು ಉಳಿತಾಯವಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಇಂದು ಮಧ್ಯರಾತ್ರಿಯಿಂದ(ಏ.8) ಹೊಸ ದರ ಜಾರಿಗೆ ಬರಲಿದೆ. ATGL ಪ್ರತಿ ಕೆಜಿಗೆ ಸಿಎನ್‌ಜಿ ಬೆಲೆಯಲ್ಲಿ 8.13 ರೂ.ವರೆಗೆ ಮತ್ತು ಪಿಎನ್‌ಜಿಯ ಬೆಲೆ ಪ್ರತಿ ಎಸ್‌ಸಿಎಂಗೆ ರೂ. 5.06 ವರೆಗೆ ಇಳಿಕೆ ಮಾಡಿದೆ. ನಮ್ಮ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ (ಜಿಎಗಳು) ಸಿಎನ್‌ಜಿ ಮತ್ತು ಪಿಎನ್‌ಜಿಯಲ್ಲಿ ಗ್ಯಾಸ್ ಬೆಲೆಗಳ ಕಡಿತ ಲಗತ್ತಿಸಲಾದ ಕೋಷ್ಟಕದಲ್ಲಿ ಒದಗಿಸಲಾಗಿದೆ ಎಂದು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ತಿಳಿಸಿದೆ.