ವಾರಣಾಸಿ:ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನೇ OLX ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
OLXನಲ್ಲಿ ಮಾರಾಟಕ್ಕೆ ಮೋದಿ ಸಾರ್ವಜನಿಕ ಸಂಪರ್ಕ ಕಚೇರಿ ಪಿಎಂ ನರೇಂದ್ರ ಮೋದಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಒಎಲ್ಎಕ್ಸ್ (OLX) ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಜಾಹೀರಾತು ನೀಡಿದ ಬಳಿಕ ಈ ಕಚೇರಿಯನ್ನು ಏಕೆ ಮಾರಾಟ ಮಾಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕವಾಗಿ ಪ್ರಾರಂಭವಾಗಿದೆ.
OLXನಲ್ಲಿ ಮಾರಾಟಕ್ಕೆ ಮೋದಿ ಸಾರ್ವಜನಿಕ ಸಂಪರ್ಕ ಕಚೇರಿ ಮಾರಾಟಕ್ಕೆ ಇಟ್ಟವರು ಪ್ರಧಾನಿಯವರ ಸಾರ್ವಜನಿಕ ಸಂಪರ್ಕ ಕಚೇರಿಗೆ 7,50,00,000(7.5 ಕೋಟಿ ರೂ. )ಬೆಲೆಯನ್ನು ನಿಗದಿಪಡಿಸಿದ್ದಾರೆ. ಅಲ್ಲದೇ ಒಎಲ್ಎಕ್ಸ್ ಸೈಟ್ನಲ್ಲಿ ನಾಲ್ಕು ಫೋಟೋಗಳನ್ನು ಹಾಕಲಾಗಿದೆ. ಅದರಲ್ಲಿ ಮೂರು ಫೋಟೋಗಳು ಜವಾಹರ್ ನಗರದ ಸಾರ್ವಜನಿಕ ಸಂಪರ್ಕ ಕಚೇರಿಯದ್ದಾಗಿದ್ದು, ಇನ್ನೊಂದು ಹಳೆಯ ಜನಸಂಪರ್ಕ ಕಚೇರಿ ರವೀಂದ್ರಪುರಿಯದ್ದಾಗಿದೆ. ಒಎಲ್ಎಕ್ಸ್ನಲ್ಲಿ ತಪ್ಪಾದ ವಿಳಾಸವನ್ನು ಕೂಡ ಹಾಕಲಾಗಿದೆ. ಇದರಲ್ಲಿ ಮಾರಾಟಗಾರನ ಹೆಸರನ್ನು ಲಕ್ಷ್ಮೀಕಾಂತ್ ಓಜಾ ಎಂದು ನಮೂದಿಸಲಾಗಿದೆ. OLX ನಲ್ಲಿ ಜಾಹೀರಾತು ಸಂಖ್ಯೆ ID 1612346492 ರಲ್ಲಿ ಈ ಮಾಹಿತಿ ನೀಡಲಾಗಿದೆ.
ಓದಿ:ಬಂಗಾಳದಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲು: ಸರ್ಕಾರದ ಪ್ರತಿಕ್ರಿಯೆ ಕೇಳಿದ ನ್ಯಾಯಪೀಠ