ETV Bharat Karnataka

ಕರ್ನಾಟಕ

karnataka

ETV Bharat / bharat

ಪಿಕೆಎಲ್ ನಂತರ ಕಬಡ್ಡಿಯ ನಿಜವಾದ ಬೆಳವಣಿಗೆ : ದೀಪಕ್ - ದೀಪಕ್ ನಿವಾಸ್ ಹೂಡಾ

ಪ್ರೋ ಕಬ್ಬಡ್ಡಿ ಲೀಗ್​​ ಬಂದ ನಂತರ ಕಬಡ್ಡಿಯ ನಿಜವಾದ ಬೆಳವಣಿಗೆಯಾಯಿತು ಅಲ್ಲದೆ ಜನರು ನಮ್ಮನ್ನು ಗುರುತಿಸಿಲು ಪ್ರಾರಂಭಿಸಿದರು. ಸದ್ಯ ಕೋವಿಡ್​​​ ನಮ್ಮ ಎಲ್ಲಾ ಕ್ರೀಡಾ ಪ್ರಕ್ರಿಯೆಗಳಿಗೆ ಬೀಗ ಹಾಕಿದೆ. ಇದರಿಂದ ಆಟದಿಂದ ದೂರವಿರಬೇಕಾಗಿ ಬಂತು ಎಂದು ಕರಾಳ ಕೊರೊನಾ ದಿನಗಳನ್ನು ನೆನಪಿಸಿಕೊಂಡರು.

actual-growth-of-kabaddi-happened-after-pkl-deepak
ದೀಪಕ್ ನಿವಾಸ್ ಹೂಡಾ
author img

By

Published : Feb 5, 2021, 5:48 PM IST

ಜೈಪುರ : ಆಟಗಳ ಬೆಳವಣಿಗೆಗಳಿಗೆ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸಾಕಷ್ಟು ಕೊಡುಗೆ ನೀಡಿದೆ ಎಂದು ಭಾರತ ರಾಷ್ಟ್ರೀಯ ಕಬಡ್ಡಿ ತಂಡದ ನಾಯಕ ದೀಪಕ್ ನಿವಾಸ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.

in article image
ಭಾರತ ರಾಷ್ಟ್ರೀಯ ಕಬಡ್ಡಿ ತಂಡದ ನಾಯಕ ದೀಪಕ್ ನಿವಾಸ್ ಹೂಡಾ

ಪ್ರೋ ಕಬ್ಬಡ್ಡಿ ಲೀಗ್​​ ಬಂದ ನಂತರ ಕಬಡ್ಡಿಯ ನಿಜವಾದ ಬೆಳವಣಿಗೆಯಾಯಿತು, ಅಲ್ಲದೆ ಜನರು ನಮ್ಮನ್ನು ಗುರುತಿಸಿಲು ಪ್ರಾರಂಭಿಸಿದರು. ಸದ್ಯ ಕೋವಿಡ್​​​ ನಮ್ಮ ಎಲ್ಲಾ ಕ್ರೀಡಾ ಪ್ರಕ್ರಿಯೆಗಳಿಗೆ ಬೀಗ ಹಾಕಿದೆ. ಇದರಿಂದ ಆಟದಿಂದ ದೂರವಿರಬೇಕಾಗಿ ಬಂತು ಎಂದು ಕರಾಳ ಕೊರೊನಾ ದಿನಗಳನ್ನು ನೆನಪಿಸಿಕೊಂಡರು.

ಈಗ ಸ್ಪರ್ಧಾತ್ಮಕ ಕ್ರೀಡೆಗಳು ಮತ್ತು ಪಂದ್ಯಾವಳಿ ಪುನರಾರಂಭಗೊಂಡಿವೆ. ಕಬಡ್ಡಿ ಪ್ರಾರಂಭವಾಗುವುದನ್ನು ಕಾತುರತೆಯಿಂದ ಕಾಯುತ್ತಿದ್ದೇವೆ. ಲಾಕ್​ಡೌನ್​ ಟೈಮ್​ನಲ್ಲಿ ಮನೆಯಲ್ಲಿರುವುದು ಬೇಸರ ತಂದಿದೆ. ಒಳಗೆ ಅಥವಾ ಟೆರೇಸ್​ ಮಲೆ ತಿರುಗಾಡುವುದರಲ್ಲಿಯೇ ದಿನಗಳು ಕಳೆದು ಹೋದವು ಎಂದು ಲಾಕ್​ಡೌನ್​ ಸಮಯವನ್ನು ನೆನಪಿಸಿಕೊಂಡರು.

ABOUT THE AUTHOR

...view details