ಹೈದರಾಬಾದ್: ಕೊರೊನಾ ಎರಡನೇ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ. ಈ ಕೊರೊನಾದಿಂದಾಗಿ ಸಿನಿಮಾ ರಂಗವೂ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾಗೆ ಅನೇಕ ಜನಪ್ರಿಯ ನಟ-ನಟಿಯರು ಪ್ರಾಣ ತೆತ್ತಿದ್ದಾರೆ. ಅದರಂತೆ ಬಹುಭಾಷಾ ನಟಿಯೊಬ್ಬರ ಪುತ್ರ ಸಹ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.
ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ನಟಿಯ ಪುತ್ರ ಕೋವಿಡ್ಗೆ ಬಲಿ, ಗಂಡನ ಸ್ಥಿತಿ ಚಿಂತಾಜನಕ! - ನಟಿ ಕವಿತ
ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಟಾಲಿವುಡ್ ನಟಿಯೊಬ್ಬರ ಪುತ್ರ ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ತೆಲಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಚಿರಪರಿಚಿತರಾಗಿರುವ ನಟಿ ಕವಿತ ಅವರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. ಕವಿತ ಮಗ ಸಂಜಯ್ ರೂಪ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದಾಗ ಕೊರೊನಾ ಇರುವುದು ದೃಢಪಟ್ಟಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಂಜಯ್ ರೂಪ್ ಮೃತಪಟ್ಟಿದ್ದಾರೆ.
ಕವಿತ ಅವರ ಗಂಡ ಸಹ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅವರ ಸ್ಥಿತಿಯೂ ಸಹ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಕವಿತರ ಮಗ ಸಂಜಯ್ ಮೃತಪಟ್ಟ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.