ಕರ್ನಾಟಕ

karnataka

ಹಿರಿಯ ನಟಿ ಕವಿತಾ ಮನೆಯಲ್ಲಿ ಮತ್ತೊಂದು ದುರಂತ!

By

Published : Jun 30, 2021, 5:25 PM IST

ಟಾಲಿವುಡ್ ಹಿರಿಯ ನಟಿ ಕವಿತಾ ಅವರ ಪತಿ ದಶರಥ ರಾಜ್ ಕೊರೊನಾಗೆ ಬಲಿಯಾಗಿದ್ದಾರೆ. ಕೇವಲ 15 ದಿನಗಳಲ್ಲಿ ಮಗ ಮತ್ತು ಪತಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಕವಿತಾ ಮನೆಯಲ್ಲಿ ಮತ್ತೊಂದು ದುರಂತ
ಕವಿತಾ ಮನೆಯಲ್ಲಿ ಮತ್ತೊಂದು ದುರಂತ

ಟಾಲಿವುಡ್ ಹಿರಿಯ ನಟಿ ಕವಿತಾ ಅವರ ಮನೆಯಲ್ಲಿ ಕೊರೊನಾ ಮತ್ತೊಂದು ಹಾವಳಿ ಮಾಡಿದೆ. ಅವರ ಪುತ್ರ ಸಂಜಯ್​​ ​​​​​ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಘಟನೆ ನಡೆದು ಎರಡು ವಾರಗಳೂ ಆಗಿಲ್ಲ. ಇಂದು ಅವರ ಪತಿ ದಶರಥ ರಾಜ್ ಸಹ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಅವರು, ಕೋವಿಡ್​​​​​ನಿಂದಾಗಿ ತೀರಾ ಗಂಭೀರ ಸ್ಥಿತಿಗೆ ತಲುಪಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಅನೇಕ ಚಲನಚಿತ್ರ ನಟ, ನಟಿಯರು ಈಗಾಗಲೇ ತಮ್ಮ ಬಂಧು ಬಾಂಧವರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇದೀಗ ಇಂತಹದ್ದೇ ಪರಿಸ್ಥಿತಿ ಹಿರಿಯ ನಟಿ ಕವಿತಾ ಅವರಿಗೂ ಬಂದಿದೆ. ಕೇವಲ 15 ದಿನಗಳಲ್ಲಿ ಮಗ ಮತ್ತು ಪತಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಕವಿತಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಯಾಗಿ ಹೆಸರು ಕೂಡಾ ಮಾಡಿದ್ದಾರೆ. ಪ್ರಸ್ತುತ ಅವರು ಕೆಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details