ಚೆನ್ನೈ(ತಮಿಳುನಾಡು) :ನಟಿ ಅಂಬಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಚೆನ್ನೈ ಪೊಲೀಸರು ಲೈಂಗಿಕ ಕಿರುಕುಳ ಕೇಸ್ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನಟಿ ಅಂಬಿಕಾ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆಗೆ ಪೊಲೀಸ್ ಇಲಾಖೆ ಸ್ಪಂದಿಸಿದೆ.
ಅಪರಾಧ ಮಾಡುವವರು 'ಅಪ್ರಾಪ್ತ ಅಥವಾ 100 ವರ್ಷದವರೇ ಆಗಲಿ ಶಿಕ್ಷೆಯಾಗಬೇಕು': ನಟಿ ಅಂಬಿಕಾ - ಲೈಂಗಿಕ ಅಪರಾಧಗಳು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ
ಅಪ್ರಾಪ್ತರಾಗಲಿ ಅಥವಾ 100 ವರ್ಷ ವಯಸ್ಸಿನವರಾಗಲಿ ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಟಿ ಅಂಬಿಕಾ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಟಿ ಅಂಬಿಕಾ
ಚೆನ್ನೈ ಪೊಲೀಸರು 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕಾಶ್ ಎಂಬ ವ್ಯಕ್ತಿಯನ್ನು ಫೂನಿತಾ ಥೋಮೈಯರ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಟ್ವಿಟರ್ನಲ್ಲಿ ಬರೆದಕೊಂಡಿದ್ದರು. ಈ ಟ್ವೀಟ್ಗೆ ಅಂಬಿಕಾ ಅವರು 'ಲೈಂಗಿಕ ಅಪರಾಧಗಳು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ಆ ಅಪರಾಧಗಳನ್ನು ಮಾಡಿದವರಿಗೆ ತಕ್ಷಣವೇ ಶಿಕ್ಷೆಯಾಗಬೇಕು. ಅಪರಾಧಿ ಅಥವಾ ಆರೋಪಿ ಅಪ್ರಾಪ್ತನಾಗಿರಲಿ ಅಥವಾ ನೂರು ವರ್ಷ ವಯಸ್ಸಿನವನಾಗಿರಲಿ, ಅಪರಾಧವು ಅಪರಾಧವೇ' ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ :ಪ್ಯಾರಿಸ್‌ನಿಂದ ಪ್ರವಾಸಕ್ಕೆ ಬಂದ ಮಹಿಳೆ: ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ ಆರೋಪ