ಚಂಡೀಗಢ: ಬಾಲಿವುಡ್ ನಟಿಯ ಮನೆಗೆ ನುಗ್ಗಿ ಚಾಕು ತೋರಿಸಿ ಆರು ಲಕ್ಷ ರೂಪಾಯಿಗಳನ್ನು ದರೋಡೆ ಮಾಡಲಾಗಿದೆ.
ಕತ್ತಿನ ಬಳಿ ಚಾಕು ಇರಿಸಿ ಬಾಲಿವುಡ್ ನಟಿ ಮನೆಯಲ್ಲಿ ದರೋಡೆ - ಅಲಂಕೃತ ಸಹೈ
ಬಾಲಿವುಡ್ ನಟಿ ಅಲಂಕೃತ ಸಹೈ ಅವರ ಸೆಕ್ಟರ್ -27 ನಿವಾಸದಲ್ಲಿ ದರೋಡೆ ಮಾಡಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಆಕೆಯ ಮನೆಗೆ ನುಗ್ಗಿ ಚಾಕು ತೋರಿಸಿ ದರೋಡೆ ಮಾಡಿದ್ದಾರೆ.
ನಟಿ ಅಲಂಕೃತ ಸಹೈ ಅವರು ಸೆಕ್ಟರ್ -27 ರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಇದನ್ನು ಅವರು ಒಂದು ತಿಂಗಳ ಹಿಂದಷ್ಟೇ ಬಾಡಿಗೆಗೆ ಪಡೆದಿದ್ದರು. ಇನ್ನು ಘಟನೆ ಸಂಬಂಧ ಪೊಲೀಸರಿಗೆ ನಟಿ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಟಿ ಮನೆಯಲ್ಲಿ ಒಬ್ಬರೇ ಇದ್ದಾಗ ಮೂವರು ಮುಸುಕುಧಾರಿಗಳು ಮನೆಗೆ ಪ್ರವೇಶಿಸಿದ್ದು, ಅವರಲ್ಲಿ ಒಬ್ಬ ನಟಿ ಕತ್ತಿನ ಮೇಲೆ ಚಾಕು ಇರಿಸಿದ್ದಾನೆ. ನಂತರ ಆರು ಲಕ್ಷ ರೂಪಾಯಿಗಳೊಂದಿಗೆ ಪರಾರಿಯಾಗಿದ್ದಾರೆ. ಈ ಸಂಬಂಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.