ಕರ್ನಾಟಕ

karnataka

ETV Bharat / bharat

ಗೋವಾ ಸಿಎಂ ಭೇಟಿಯಾದ ಕೆಜಿಎಫ್ ಸ್ಟಾರ್ ಯಶ್​, ಪತ್ನಿ ರಾಧಿಕಾ ಪಂಡಿತ್ - Yash couple met goa cm in Panaji

ಗೋವಾ ರಾಜಧಾನಿ ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರನ್ನು ಕೆಜಿಎಫ್ ಸ್ಟಾರ್‌ ಯಶ್​ ಮತ್ತು ಪತ್ನಿ ರಾಧಿಕಾ ಪಂಡಿತ್ ಭೇಟಿ ಮಾಡಿದ್ದಾರೆ.

Actor Yash couple met goa cm
ಗೋವಾ ಸಿಎಂ ಭೇಟಿಯಾದ ಕೆಜಿಎಫ್ ಸ್ವಾರ್​ ಯಶ್

By

Published : May 4, 2022, 1:37 PM IST

Updated : May 4, 2022, 4:27 PM IST

ಪಣಜಿ(ಗೋವಾ):ನಟ​ ಯಶ್ ದಂಪತಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್​ ಸಾವಂತ್​ ಅವರನ್ನು ಪಣಜಿಯಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ಕುರಿತ ಫೋಟೋಗಳನ್ನು ಸಿಎಂ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಗೋವಾ ಸಿಎಂ ಭೇಟಿಯಾದ ಕೆಜಿಎಫ್ ಸ್ವಾರ್​ ಯಶ್​, ಪತಿ ರಾಧಿಕಾ ಪಂಡಿತ್

ಕೆಜಿಎಫ್​ ಸೂಪರ್​ಸ್ಟಾರ್​ ಯಶ್,​ ಪತ್ನಿ ರಾಧಿಕಾ ಪಂಡಿತ್ ಹಾಗೂ ಅವರ ತಂಡ​ವನ್ನು ಭೇಟಿ ಮಾಡಿ ಖುಷಿಯಾಗಿದೆ ಎಂದು ಸಾವಂತ್​ ಟ್ವೀಟ್​ನಲ್ಲಿ ಬರೆದಿದ್ದಾರೆ. ಇನ್ನು, ರಾಧಿಕಾ ಪಂಡಿತ್ ಅವರ ತಾಯಿಯ ಊರು ಗೋವಾ ಆಗಿದ್ದು, ಇಲ್ಲಿಯೇ ರಾಧಿಕಾ ಯಶ್ ನಿಶ್ಚಿತಾರ್ಥ ನಡೆದಿತ್ತು. ಹೀಗಾಗಿ ಗೋವಾದ ಜೊತೆ ಯಶ್​ ದಂಪತಿಗೆ ಉತ್ತಮ ನಂಟಿದೆ.

ಅಲ್ಲದೇ, 'ಕೆಜಿಎಫ್ 2' ಚಿತ್ರ ಬಿಡುಗಡೆಗೆ ಮುನ್ನ ಬೇರೆ-ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡಿದ್ದರು. ಸಿನಿಮಾ ತೆರೆಗೆ ಬಂದ ಮೇಲೆ ಯಶ್​ ದಂಪತಿ ಗೋವಾಕ್ಕೆ ಹಾರಿದ್ದರು. ಅಲ್ಲಿ ಕುಟುಂಬದ ಸಮೇತವಾಗಿ ಸಮಯ ಕಳೆದಿದ್ದರು.

ಗೋವಾ ಸಿಎಂ ಭೇಟಿಯಾದ ಕೆಜಿಎಫ್ ಸ್ವಾರ್​ ಯಶ್​, ಪತಿ ರಾಧಿಕಾ ಪಂಡಿತ್

'ಕೆಜಿಎಫ್ 2' ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಒಟ್ಟಾರೆ 1 ಸಾವಿರ ಕೋಟಿ ರೂ. ಕ್ಲಬ್​ ಸೇರಿದೆ. ಅಲ್ಲದೇ, ಚಿತ್ರ ಬಿಡುಗಡೆಯಾಗಿ 20 ದಿನಗಳು ಆಗಿದ್ದು, ಜಗತ್ತಿನಾದ್ಯಂತ 1,100 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಪ್ರತಿನಿಧಿಗಳನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

Last Updated : May 4, 2022, 4:27 PM IST

ABOUT THE AUTHOR

...view details