ಕರ್ನಾಟಕ

karnataka

ETV Bharat / bharat

ಲೈಗರ್ ಹಣದ ಮೂಲ ತನಿಖೆ: ಇಡಿ ಕಚೇರಿಗೆ ಹಾಜರಾದ ನಟ ವಿಜಯ್ ದೇವರಕೊಂಡ - ಈಟಿವಿ ಭಾರತ ಕನ್ನಡ

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಉಲ್ಲಂಘನೆಗಳ ಆರೋಪಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಅಧಿಕೃತ ಮೂಲಗಳ ಪ್ರಕಾರ, ಚಲನಚಿತ್ರ ನಿರ್ಮಾಣಕ್ಕೆ ಹಣದ ಮೂಲ, ಅವರ ಸಂಭಾವನೆ ಮತ್ತು ಅಮೆರಿಕನ್​ ಬಾಕ್ಸರ್ ಮೈಕ್ ಟೈಸನ್ ಸೇರಿದಂತೆ ಇತರ ನಟರಿಗೆ ಸಂಭಾವನೆ ಪಾವತಿಸಿದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಪ್ರಶ್ನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಲೈಗರ್ ತನಿಖೆ: ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ನಟ ವಿಜಯ್ ದೇವರಕೊಂಡ
Actor Vijay Devarakonda attended the hearing at the ED office

By

Published : Nov 30, 2022, 7:45 PM IST

ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ಲೈಗರ್ ಚಲನಚಿತ್ರ ನಿರ್ಮಾಣಕ್ಕೆ ಹಣ ಹೂಡಿಕೆ ಮೂಲದ ತನಿಖೆಗೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ಹೈದರಾಬಾದ್​ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಹಾಜರಾಗಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಉಲ್ಲಂಘನೆಗಳ ಆರೋಪಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಅಧಿಕೃತ ಮೂಲಗಳ ಪ್ರಕಾರ, ಚಲನಚಿತ್ರ ನಿರ್ಮಾಣಕ್ಕೆ ಹಣದ ಮೂಲ, ಅವರ ಸಂಭಾವನೆ ಮತ್ತು ಅಮೆರಿಕನ್​ ಬಾಕ್ಸರ್ ಮೈಕ್ ಟೈಸನ್ ಸೇರಿದಂತೆ ಇತರ ನಟರಿಗೆ ಸಂಭಾವನೆ ಪಾವತಿಸಿದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಪ್ರಶ್ನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ, ಇಡಿ ಅಧಿಕಾರಿಗಳು ನವೆಂಬರ್ 17 ರಂದು ಚಲನಚಿತ್ರ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ - ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಲೈಗರ್ ಚಿತ್ರಕ್ಕೆ ಹೂಡಿಕೆಯ ಮೂಲದ ಬಗ್ಗೆ ಅವರಿಗೆ ಪ್ರಶ್ನಿಸಲಾಗಿತ್ತು. ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಮಾರು 125 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಾಯಕರಾಗಿ ನಟಿಸಿರುವ ಈ ಚಿತ್ರದ ಭಾಗಶಃ ಚಿತ್ರೀಕರಣ ಲಾಸ್ ವೇಗಾಸ್‌ನಲ್ಲಿ ನಡೆದಿದೆ. ಆದಾಗ್ಯೂ, ಇದು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡಿದೆ.

ಸಂಶಯಾಸ್ಪದ ಮಾರ್ಗಗಳ ಮೂಲಕ ಚಿತ್ರಕ್ಕೆ ಹೂಡಿಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ದೂರು ದಾಖಲಿಸಿದ ನಂತರ ಇಡಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ರಾಜಕಾರಣಿಗಳೂ ಕೂಡ ಲೈಗರ್ ನಲ್ಲಿ ಹಣ ಹೂಡಿದ್ದಾರೆ ಎಂದು ಬಕ್ಕಾ ಜಡ್ಸನ್ ದೂರಿದ್ದರು. ಹೂಡಿಕೆದಾರರು ತಮ್ಮ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸುವ ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಫೆಮಾ ಉಲ್ಲಂಘಿಸಿ ವಿದೇಶಗಳಿಂದ ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಇಡಿ ಅಧಿಕಾರಿಗಳು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ಹಲವಾರು ಕಂಪನಿಗಳು ಚಲನಚಿತ್ರ ನಿರ್ಮಾಪಕರ ಖಾತೆಗಳಿಗೆ ಹಣವನ್ನು ವರ್ಗಾಯಿಸಿವೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಮೈಕ್ ಟೈಸನ್ ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ವಿದೇಶಿ ನಟರಿಗೆ ಹಣವನ್ನು ರವಾನೆ ಮಾಡಿದವರ ವಿವರಗಳನ್ನು ಮತ್ತು ಪಾವತಿಗಳನ್ನು ಹೇಗೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡುವಂತೆ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಕೇಳಲಾಗಿದೆ.

ಇದನ್ನೂ ಓದಿ: ಇಡಿ ಎದುರು ಹಾಜರಾದ ಪುರಿ ಜಗನ್ನಾಥ್​, ಚಾರ್ಮಿ ಕೌರ್..'ಲೈಗರ್'ಗೆ​ ಬಂಡವಾಳ ಎಲ್ಲಿಂದ ಬಂತು ಪ್ರಶ್ನೆ?​

ABOUT THE AUTHOR

...view details