ಕರ್ನಾಟಕ

karnataka

ETV Bharat / bharat

ಬಹುಭಾಷಾ ನಟ ಶರತ್​ಕುಮಾರ್ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ: ಕಾರಣ? - ಮದ್ರಾಸ್ ಹೈಕೋರ್ಟ್​

ಬಹುಭಾಷಾ ನಟ, ನಿರ್ಮಾಪಕ ಶರತ್​ಕುಮಾರ್ ದಂಪತಿಗೆ ಚೆಕ್​ಬೌನ್ಸ್​ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಿ ಚೆನ್ನೈನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

Actor Sarath Kumar and wife radhika sentenced to one year jail term in cheque fraud case
ಬಹುಭಾಷಾ ನಟ ಶರತ್​ಕುಮಾರ್ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ

By

Published : Apr 7, 2021, 3:38 PM IST

ಚೆನ್ನೈ, ತಮಿಳುನಾಡು: ಚೆಕ್​ ಬೌನ್ಸ್ ಪ್ರಕರಣದಲ್ಲಿ ತಮಿಳುನಟ ಶರತ್​ಕುಮಾರ್ ಮತ್ತು ಆತನ ಪತ್ನಿ, ನಟಿ ರಾಧಿಕಾ ಶರತ್​ ಕುಮಾರ್​ಗೆ ಚೆನ್ನೈನ ವಿಶೇಷ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಶರತ್​ ಕುಮಾರ್ ದಂಪತಿಯ ವಿರುದ್ಧದ ಎರಡು ಚೆಕ್​ ಬೌನ್ಸ್ ಪ್ರಕರಣಗಳನ್ನು ರದ್ದು ಮಾಡಲು 2019ರಲ್ಲಿ ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಇದರಿಂದ ಸಿನಿ ದಂಪತಿಗೆ ಮತ್ತಷ್ಟು ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು.

ಇದನ್ನೂ ಓದಿ:ಮಂಗಳನಲ್ಲಿ ಮೂಡಿತೇ ಮಳೆಬಿಲ್ಲು.! ಈ ಬಗ್ಗೆ ನಾಸಾ ಹೇಳಿದ್ದೇನು?

ಚೆನ್ನೈ ಸಮೀಪದ ನಂದನಂನಲ್ಲಿರುವ ಸಿನಿಮಾಗಳ ನಿರ್ಮಾಣಕ್ಕೆ ಸಾಲ ನೀಡುವ ಕಂಪನಿಯಾದ ರೇಡಿಯನ್ಸ್ ಮೀಡಿಯಾ ಪ್ರೈವೇಟ್​​ ಲಿಮಿಟೆಡ್​ ಶರತ್​ಕುಮಾರ್ ದಂಪತಿ ಹಾಗೂ ಇತರರ ಪಾಲುದಾರಿಕೆಯಲ್ಲಿರುವ ಮ್ಯಾಜಿಕ್ ಫ್ರೇಮ್ಸ್ ಎಂಬ ಸಂಸ್ಥೆಗೆ ಭಾರಿ ಮೊತ್ತದ ಸಾಲ ನೀಡಿತ್ತು.

ಇದಕ್ಕೆ ಪ್ರತಿಯಾಗಿ ಶರತ್ ಕುಮಾರ್ ಅವರು ಸಂಸ್ಥೆಗೆ ಎರಡು ಚೆಕ್​ಗಳನ್ನು ನೀಡಿದ್ದು, ಮಾರ್ಚ್ 2017ರಂದು ಈ ಚೆಕ್​ಗಳು ಬೌನ್ಸ್ ಆಗಿದ್ದವು. ಈ ಪ್ರಕರಣ ಈಗ ಇಬ್ಬರೂ ಸಿನಿ ದಂಪತಿಗೆ ಸಂಕಷ್ಟವಾಗಿ ಪರಿಣಮಿಸಿದೆ.

ABOUT THE AUTHOR

...view details