ಕರ್ನಾಟಕ

karnataka

ETV Bharat / bharat

ನಟಿ, ಬಿಜೆಪಿ ನಾಯಕಿ ಖುಷ್ಬೂ ಟ್ವಿಟರ್ ಖಾತೆ ಮತ್ತೊಮ್ಮೆ ಹ್ಯಾಕ್​ - ಬಿಜೆಪಿ ನಾಯಕಿ ಖುಷ್ಬೂ ಸುಂದರ್

Kushboo Sunder: ತಮಿಳುನಾಡಿನ ಬಿಜೆಪಿ ನಾಯಕಿ ಹಾಗು ಚಿತ್ರ ನಟಿ ಖುಷ್ಬೂ ಸುಂದರ್​ ಬಳಸುತ್ತಿದ್ದ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಅವರಿಗೆ ಸಾಮಾಜಿಕ ಜಾಲತಾಣದ ಬಳಕೆ ಸಾಧ್ಯವಾಗುತ್ತಿಲ್ಲ.

Actor-politician Kushboo
Actor-politician Kushboo

By

Published : Jul 20, 2021, 3:58 PM IST

ಚೆನ್ನೈ(ತಮಿಳುನಾಡು):ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಜನಪ್ರಿಯ ನಟಿ ಹಾಗು ಭಾರತೀಯ ಜನತಾ ಪಾರ್ಟಿ(BJP)ಯ ನಾಯಕಿ ಖುಷ್ಬೂ ಸುಂದರ್​ ಅವರ ಟ್ವಿಟರ್ ಖಾತೆಗೆ ಸೈಬರ್ ದಾಳಿಕೋರರು ಎರಡನೇ ಬಾರಿಗೆ ಕನ್ನ ಹಾಕಿದ್ದಾರೆ. ಇದೀಗ ಅವರ ಟ್ವಿಟರ್​ನಲ್ಲಿದ್ದ ಎಲ್ಲ ಟ್ವೀಟ್​ಗಳನ್ನು ಅಳಿಸಿ ಹಾಕಲಾಗಿದೆ.

ನಟಿ, ಬಿಜೆಪಿ ನಾಯಕಿ ಖುಷ್ಬೂ ಟ್ವಿಟರ್ ಖಾತೆ ಹ್ಯಾಕ್​

2020ರ ಏಪ್ರಿಲ್ ತಿಂಗಳಲ್ಲಿ ಖುಷ್ಬೂ ಟ್ವಿಟರ್‌ ಖಾತೆ ಹ್ಯಾಕ್ ಆಗಿತ್ತು. ಇದೀಗ ಮತ್ತೆ ಹ್ಯಾಕ್​ ಆಗಿರುವ ಮಾಡಿರುವ ದುಷ್ಕರ್ಮಿಗಳು ಅದಕ್ಕೆ ಬ್ರಯಾನ್​ ಎಂದು ಹೆಸರಿಟ್ಟಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಖುಷ್ಬೂ ತಮ್ಮ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ ಎಂದಿದ್ದಾರೆ. ಕಳೆದ ಮೂರು ದಿನಗಳಿಂದ ನನ್ನ ಟ್ವಿಟರ್​ ಖಾತೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾನ್​​ ಕಳ್ಳನ ಹಿಡಿಯಲು ರೈತರಾದ ಪೊಲೀಸರು.. ಯಾವ ಸಿನಿಮಾಗಿಂತ ಕಮ್ಮಿಯಿಲ್ಲ ಈ ಸ್ಟೋರಿ..

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಇಂಡಿಯಾ, ಮುಂದಿನ 48 ಗಂಟೆಗಳಲ್ಲಿ ಇದನ್ನ ಸರಿಪಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.

ABOUT THE AUTHOR

...view details