ಚೆನ್ನೈ:ಕೊರೊನಾ ಲಸಿಕೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮನ್ಸೂರ್ ಅಲಿ ಖಾನ್ಗೆ ಮದ್ರಾಸ್ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಕೊರೊನಾ ಲಸಿಕೆ ವಿರುದ್ಧ ವಿವಾದಾತ್ಮಕ ಹೇಳಿಕೆ: ನಟ ಮನ್ಸೂರ್ ಅಲಿ ಖಾನ್ಗೆ ನಿರೀಕ್ಷಣಾ ಜಾಮೀನು - ನಟ ಮನ್ಸೂರ್ ಅಲಿ ಖಾನ್ಗೆ ನಿರೀಕ್ಷಣಾ ಜಾಮೀನು
ಕೊರೊನಾ ಲಸಿಕೆ ಬಗ್ಗೆ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮನ್ಸೂರ್ ಅಲಿ ಖಾನ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿ 2 ಲಕ್ಷ ರೂಪಾಯಿ ದಂಡ ವಿಧಿಸಿ ಮುಂದೆ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಿದೆ.
ನಟ ಮನ್ಸೂರ್ ಅಲಿ ಖಾನ್ಗೆ ನಿರೀಕ್ಷಣಾ ಜಾಮೀನು
ಲಸಿಕೆ ಬಗ್ಗೆ ವದಂತಿಗಳನ್ನು ಹರಡಬಾರದು ಮತ್ತು ಈ ವಿಷಯದ ಬಗ್ಗೆ ಉದ್ವಿಗ್ನತೆ ಸೃಷ್ಟಿಸಬಾರದು ಎಂದು ನ್ಯಾಯಮೂರ್ತಿ ಧಂತಪಾಣಿ ನಟನಿಗೆ ಸಲಹೆ ನೀಡಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಂಬುವಂತೆ ನಟನಿಗೆ ತಾಕೀತು ಮಾಡಿದ್ದಾರೆ.
TAGGED:
ನಟ ಮನ್ಸೂರ್ ಅಲಿ ಖಾನ್