ಕರ್ನಾಟಕ

karnataka

ETV Bharat / bharat

ಡ್ರಗ್ಸ್​ ಪ್ರಕರಣ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗರ್ಲ್​​ಫ್ರೆಂಡ್​ನ ಸಹೋದರ ಬಂಧನ - ಗ್ಯಾಬ್ರಿಯೆಲಾ ಡೆಮೆಟ್ರಿಯೇಡ್ಸ್

ತನ್ನ ಮನೆಯಲ್ಲಿ ಗಾಂಜಾ ಹೊಂದಿದ್ದ ಆರೋಪದಲ್ಲಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗರ್ಲ್​​ಫ್ರೆಂಡ್​ನ ಸಹೋದರನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

Actor Arjun Rampal's girlfriend's brother Augisilaos arrested in Goa
ಡ್ರಗ್ಸ್​ ಪ್ರಕರಣ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗರ್ಲ್​​ಫ್ರೆಂಡ್​ನ ಸಹೋದರ ಬಂಧನ

By

Published : Sep 26, 2021, 4:12 AM IST

Updated : Sep 26, 2021, 5:18 AM IST

ಮುಂಬೈ:ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ ಗ್ಯಾಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರ ಸಹೋದರ ಅಗಿಸಿಲಾವೋನನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ ) ಅಧಿಕಾರಿಗಳು ಅಗಿಸಿಲಾವೋನನ್ನು ಬಂಧಿಸಿದ್ದು, ತನ್ನ ಮನೆಯಲ್ಲಿ ಸಣ್ಣ ಪ್ರಮಾಣದ ಗಾಂಜಾ ಹೊಂದಿದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಗಿಸಿಲಾವೋ ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದಾನೆ.

ಮತ್ತೊಂದು ಕಾರ್ಯಾಚರಣೆಯಲ್ಲಿ ಎನ್​ಸಿಬಿಯ ಗೋವಾ ಉಪವಿಭಾಗದ ಅಧಿಕಾರಿಗಳು ಉತ್ತರ ಗೋವಾದ ಸಿಯೋಲಿಮ್ ಗ್ರಾಮದಲ್ಲಿ ಛತ್ತೀಸ್​ಗಡ ಮೂಲದ ನೌಮಾನ್ ಸವೆರಿ (22) ಎಂಬಾತನನ್ನು ಬುಧವಾರ ಬಂಧಿಸಿದ್ದರು. ಇದಕ್ಕೂ ಮೊದಲು ಹೈದರಾಬಾದ್​ನಲ್ಲಿ ನೌಮಾನ್​ ಸ್ನೇಹಿತ ಸಿದ್ದಿಕ್ ಅಹಮದ್​ (25) ಎಂಬಾತನನ್ನು ಬಂಧಿಸಲಾಗಿತ್ತು.

ಎನ್​ಸಿಬಿಯ ಮುಂಬೈ ಮತ್ತು ಗೋವಾ ವಿಭಾಗಗಳು ಮತ್ತೊಂದು ಕಾರ್ಯಾಚರಣೆಯನ್ನು ಶುಕ್ರವಾರ ಕೈಗೊಂಡಿದ್ದು, ಉತ್ತರ ಗೋವಾದ ನಾಗೋವಾ ಗ್ರಾಮದಲ್ಲಿ ಎಕ್ಸ್​ಟಸಿ ಮಾತ್ರೆಗಳನ್ನು ಜಪ್ತಿ ಮಾಡಿತ್ತು. ಈ ವೇಳೆ ಮುಂಬೈ ಮೂಲದ ಮಯೂರ್ ಮೋಹ್ನಾನಿ ಎಂಬಾತನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ಆಲ್ಕೋಮೀಟರ್ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಬೆಂಗಳೂರಿನಲ್ಲಿ ಪುನಾರಂಭ

Last Updated : Sep 26, 2021, 5:18 AM IST

ABOUT THE AUTHOR

...view details