ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಗಂಟೆಗಳ ವಿಚಾರಣೆಯ ನಂತರ ನಟ ಅಜಾಜ್ ಖಾನ್ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಬಂಧಿಸಿದೆ. ಮಂಗಳವಾರ ಸಂಜೆ ಖಾನ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಡ್ರಗ್ ಪ್ರಕರಣ: 8 ಗಂಟೆಗಳ ವಿಚಾರಣೆ ಬಳಿಕ ಅಜಾಜ್ ಖಾನ್ ವಶಕ್ಕೆ ಪಡೆದ ಎನ್‌ಸಿಬಿ - ಮುಂಬೈ ಡ್ರಗ್ ಪ್ರಕರಣ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಗಂಟೆಗಳ ವಿಚಾರಣೆಯ ನಂತರ ನಟ ಅಜಾಜ್ ಖಾನ್ನನ್ನು ಎನ್‌ಸಿಬಿ ಬಂಧಿಸಿದೆ.
ಅಜಾಜ್ ಖಾನ್ ಎನ್‌ಸಿಬಿ ವಶಕ್ಕೆ
ಈ ಪ್ರಕರಣ ಸಂಬಂಧ ಎನ್‌ಸಿಬಿ ಮುಂಬೈನ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಮಾನಹಾನಿ, ದ್ವೇಷದ ಮಾತು, ಮತ್ತು ನಿಷೇಧಿತ ಆದೇಶಗಳ ಉಲ್ಲಂಘನೆಗಾಗಿ ಈ ನಟನನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೆ, ಜುಲೈ 2019 ರಲ್ಲಿ 'ಆಕ್ಷೇಪಾರ್ಹ' ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ರಚಿಸಿ ಅಪ್ಲೋಡ್ ಮಾಡಿದ್ದಕ್ಕಾಗಿ ಈತನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದರು.
ಹಲವಾರು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ ಖಾನ್, ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿದ್ದರು.