ನವದೆಹಲಿ:ಹಿಂದಿನ 24 ಗಂಟೆಗಳಲ್ಲಿ ಭಾರತದಲ್ಲಿ 3,962 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸಕ್ರಿಯ ಕೋವಿಡ್ ಪ್ರಕರಣ 40,177 ದಿಂದ 36,244 ಸಂಖ್ಯೆಗೆ ಇಳಿಕೆ ಯಾಗಿದೆ ಎಂದು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಅಂಕಿ - ಅಂಶಗಳನ್ನು ಬಿಡುಗಡೆಗೊಳಿಸಿದೆ.
ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,31,606 ಕ್ಕೆ ಏರಿಕೆ ಆಗಿದೆ. ಇದರಲ್ಲಿ ಏಳು ಮಂದಿ ಕೇರಳದವರು ಇದ್ದಾರೆ. ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ 4.49 ಕೋಟಿ (4,49,60,678) ದಾಖಲಾಗಿದೆ. ಸಕ್ರಿಯ ಪ್ರಕರಣಗಳು 0.08 ಪ್ರತಿಶತ ಇದ್ದು, ರಾಷ್ಟ್ರೀಯ COVID-19 ಚೇತರಿಕೆ ದರವು 98.73 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೋವಿಡ್ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಪ್ರಸ್ತುತ 43,92,828 ಪ್ರಕರಣಗಳ ಸಾವಿನ ಪ್ರಮಾಣವು 1.18 ರಷ್ಟು ದಾಖಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಜಾಲತಾಣದಲ್ಲಿ ಈ ಅಂಕಿ- ಅಂಶಗಳನ್ನು ಪ್ರಕಟಿಸಿದೆ.
ರಾಜಧಾನಿ ನವದೆಹಲಿಯಲ್ಲೂ ಕೋವಿಡ್ ಪ್ರಕರಣ ಇಳಿಮುಖ: ರಾಜಧಾನಿ ದೆಹಲಿಯಲ್ಲಿ 272 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದು, ಒಬ್ಬ ರೋಗಿಯು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 688 ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಆದರೆ, ಸೋಂಕಿನ ಪ್ರಮಾಣ 8.39 ಶೇಕಡಾ. 3241 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ಸಕ್ರಿಯ ರೋಗಿಗಳ ಸಂಖ್ಯೆ 1971 ಕ್ಕೆ ಇಳಿದಿದೆ ಎಂದು ದೆಹಲಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
1532 ರೋಗಿಗಳು ಹೋಮ್ ಐಸೋಲೇಶನ್‌ನಲ್ಲಿದ್ದಾರೆ. 167 ಕೊರೊನಾ ಸೋಂಕಿತರು ಮತ್ತು ಐದು ಶಂಕಿತ ಕರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 71 ರೋಗಿಗಳು ಐಸಿಯುನಲ್ಲಿದ್ದಾರೆ, 54 ಮಂದಿ ಆಮ್ಲಜನಕ ಬೆಂಬಲದಲ್ಲಿ ಮತ್ತು 10 ರೋಗಿಗಳು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಕರೋನಾ ಸೋಂಕಿತ ರೋಗಿಗಳಲ್ಲಿ 126 ರೋಗಿಗಳು ದೆಹಲಿಯವರು ಮತ್ತು 41 ರೋಗಿಗಳು ದೆಹಲಿಯ ಹೊರಗಿನವರು. ಆಸ್ಪತ್ರೆಗಳಿಗೆ 172 ರೋಗಿಗಳ ದಾಖಲಾತಿಯಿಂದಾಗಿ, ಕರೋನಾಗೆ ಕಾಯ್ದಿರಿಸಿದ ಒಟ್ಟು ಏಳು ಸಾವಿರದ 976 ಹಾಸಿಗೆಗಳಲ್ಲಿ, ಈಗ ಏಳು ಸಾವಿರದ 804 ಹಾಸಿಗೆಗಳು ಖಾಲಿ ಇವೆ ಎನ್ನಲಾಗಿದೆ.
ಪ್ರಸ್ತುತ, ಲೋಕನಾಯಕ ಆಸ್ಪತ್ರೆಯಲ್ಲಿ ಏಳು ಕರೋನಾ ಸೋಂಕಿತ ರೋಗಿಗಳು, ಲೇಡಿ ಹಾರ್ಡಿಂಜ್‌ನಲ್ಲಿ 11, ಜಿಟಿಬಿಯಲ್ಲಿ ಆರು, ಸಫ್ದರ್‌ಜಂಗ್‌ನಲ್ಲಿ ಆರು, ರಾಮ್ ಮನೋಹರ್ ಲೋಹಿಯಾದಲ್ಲಿ ಆರು, ಮುಖ್ಯ ಏಮ್ಸ್‌ನಲ್ಲಿ 20, ಹೋಲಿ ಫ್ಯಾಮಿಲಿಯಲ್ಲಿ ಐವರು, ಉತ್ತರ ರೈಲ್ವೆ ಆಸ್ಪತ್ರೆಯಲ್ಲಿ ಐದು, ಪೂರ್ವ-ಪಶ್ಚಿಮ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಐದು ರೋಗಿಗಳು, ಫೋರ್ಟಿಸ್ ವಸಂತ್ ಕುಂಜ್‌ನಲ್ಲಿ ಐದು, ಸರ್ ಗಂಗಾರಾಮ್‌ನಲ್ಲಿ ಐದು, ಮಹಾರಾಜ ಅಗ್ರಸೇನ್ ಆಸ್ಪತ್ರೆಯಲ್ಲಿ ಇಬ್ಬರು ಮತ್ತು ಜೈಪುರ ಗೋಲ್ಡನ್‌ನಲ್ಲಿ ಒಬ್ಬರು ದಾಖಲಾಗಿದ್ದಾರೆ. ಪ್ರಸ್ತುತ ಯಾವುದೇ ಕಂಟೈನ್‌ಮೆಂಟ್ ಝೋನ್ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂಓದಿ:ದಾದಾ ಸಾಹೇಬ್ ಪಾಲ್ಕೆ ಚಿತ್ರೋತ್ಸವ: ಚಾರ್ಲಿ 777 ನಿರ್ದೇಶಕ ಕಿರಣ್ ರಾಜ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ