ಚಂಢೀಗಡ್:ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಿ, ಅವರಿಗೆ ರಕ್ಷಣೆ ನೀಡಬೇಕು ಎಂಬ ಉದ್ದೇಶದಿಂದ ದೇಶದಲ್ಲಿ ಪೋಕ್ಸೋ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆ ಅನುಸಾರ ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದರೆ, ಅನೇಕ ಅಪ್ತಾಪ್ತ ಮಕ್ಕಳಿಗೆ ನ್ಯಾಯಾ ಸಿಕ್ಕಿ ಎಂಬುದು ವಿಷಾದದ ಸಂಗತಿಯಾಗಿದೆ
ದೇಶದ ಅನೇಕ ರಾಜ್ಯಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣದ ಕುರಿತು ಬಿಡುಗಡೆಯಾಗಿರುವ ಅಂಕಿ - ಅಂಶಗಳು ಆಘಾತ ಮೂಡಿಸುತ್ತಿದೆ. ವರದಿ ಅನುಸಾರ 28 ರಾಜ್ಯಗಳಲ್ಲಿ 408 ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 43 ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಧಾರ ಸಿಗದೆ ಆರೋಪಿಗಳನ್ನು ಖಲಾಸೆ ಮಾಡಲಾಗಿದೆ. 2016ರಲ್ಲಿ ಶೇ 60ರಷ್ಟು ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಹೆಚ್ಚಿನ ಖುಲಾಸೆ: ಈ ಪೋಕ್ಸೋ ಪ್ರಕರಣದಲ್ಲಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚಿನ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಕೇರಳದಲ್ಲಿ ಅನೇಕರ ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ. 2012ರಿಂದ 2021ರಲ್ಲಿ ದಾಖಲಾದ ಪ್ರಕರಣದಲ್ಲಿ ಬಹುತೇಕ ಪರಿಚಿತ ಕುಟುಂಬದವರಾಗಿದ್ದಾರೆ ಎಂಬುದು ಶಾಕಿಂಗ್ ಸಂಗತಿಯಾಗಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ನೆರೆ ಹೊರೆಯವರು ಪ್ರಕರಣದ ಆರೋಪಿಗಳಾಗಿದೆ. ಇನ್ನು ಶೇ 6ರಷ್ಟು ಪ್ರಕರಣದಲ್ಲಿ ಹೊರಗಿನವರು ಆರೋಪಿಗಳಾಗಿದ್ದು, ಅವರ ಪತ್ತೆ ಕಾರ್ಯ ಇನ್ನು ಆಗಬೇಕಿದೆ. ದೇಶದಲ್ಲಿ ವರದಿಯಾದ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ 10ರಷ್ಟು ಮಂದಿಗೆ ಮಾತ್ರ ನ್ಯಾಯ ಸಿಕ್ಕಿದೆ. ಅದು ಮೂರು ವರ್ಷಗಳ ಸಮಯದ ಬಳಿಕ
ಪಂಜಾಬ್ನಲ್ಲಿ ಗಣನೀಯ ಏರಿಕೆ ಕಂಡ ಪ್ರಕರಣ:ರಾಷ್ಟ್ರೀಯ ಅಪರಾಧ ದಾಖಲೆ ದಳದ ಅನುಸಾರ ಪಂಜಾಬ್ನಲ್ಲಿ 2,121 ಪ್ರಕರಣ ದಾಖಲಾಗಿದೆ. ಇದರಲ್ಲಿ ಮಕ್ಕಳ ಕಳ್ಳ ಸಾಗಣೆ, ಅಪಹರಣದ, ಭಿಕ್ಷಾಟನೆ, ಕೊನೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ದಾಖಲಾಗಿದೆ. ಪಂಜಾಬ್ನಲ್ಲಿ ಪೋಸ್ಕೋ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.
2019ರಲ್ಲಿ 389 ಪ್ರಕರಣ ದಾಖಲಾದರೆ 2020ರಲ್ಲಿ 720 ಪ್ರಕರಣ ದಾಖಲಾಗಿದೆ. ಲಾಕ್ಡೌನ್ ವೇಳೆ 549 ಪ್ರಕರಣ ದಾಖಲಾಗಿದೆ. ಮಕ್ಕಳ ಮೇಲೆ ಶೇ 33.7 ರಷ್ಟು ಅಪರಾಧ ಇದ್ದು, ಅದರಲ್ಲಿ ಶೇ. 99ರಷ್ಟು ಪ್ರಕರಣ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವಾಗಿದೆ. ಇದರಲ್ಲಿ 10.5 ರಷ್ಟು ಆರೋಪಿಗಳು ಕುಟುಂಬ ಸದಸ್ಯರಾಗಿದ್ದಾರೆ.