ಕರ್ನಾಟಕ

karnataka

ETV Bharat / bharat

2009ರ ಜೋಡಿ ಕೊಲೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರು ಖುಲಾಸೆ - ಛೋಟಾ ರಾಜನ್ ಖುಲಾಸೆ

ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರು ಆರೋಪಿಗಳನ್ನು ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ.

acquittal-of-four-accused-including-chhota-rajan-in-double-murder-case
2009ರ ಜೋಡಿ ಕೊಲೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರ ಖುಲಾಸೆ

By

Published : Nov 17, 2022, 5:47 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ನಡೆದ 13 ವರ್ಷಗಳ ಹಿಂದಿನ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್ ಸೇರಿ ಎಲ್ಲ ನಾಲ್ವರು ಆರೋಪಿಗಳನ್ನು ಮುಂಬೈ ವಿಶೇಷ ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನಾಲ್ವರನ್ನೂ ಆರೋಪ ಮುಕ್ತ ಮಾಡಲಾಗಿದೆ.

ಇದನ್ನೂ ಓದಿ:38 ವರ್ಷ ಹಳೆಯ ಕೇಸ್​ನಿಂದ ಭೂಗತ ದೊರೆ ಛೋಟಾ ರಾಜನ್ ಖುಲಾಸೆ

2009ರ ಜುಲೈ 29ರಂದು ಭಿಂಡಿ ಬಜಾರ್‌ನಲ್ಲಿ ಮತ್ತೊಬ್ಬ ಭೂಗತ ಪಾತಕಿ ಛೋಟಾ ಶಕೀಲ್ ಗ್ಯಾಂಗ್‌ನ ಆಸಿಫ್ ದಾಧಿ ಅಲಿಯಾಸ್ ಛೋಟೆ ಮಿಯಾನ್ ಮತ್ತು ಶಕೀಲ್ ಮೋದಕ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಛೋಟಾ ರಾಜನ್ ಈ ಜೋಡಿ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿದ್ದರು. ಇದಲ್ಲದೇ ಮೊಹಮ್ಮದ್ ಅಲಿ ಜಾನ್, ಪ್ರಣಯ್ ರಾಣೆ ಮತ್ತು ಉಮ್ಮದ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

ಇದನ್ನೂ ಓದಿ:ಹೋಟೆಲ್ ಉದ್ಯಮಿ ಕೊಲೆ ಪ್ರಕರಣ: ಪಾತಕಿ ಛೋಟಾ ರಾಜನ್ ಖುಲಾಸೆ

ಆದರೆ, ನಾಲ್ವರೂ ಆರೋಪಿಗಳ ವಿರುದ್ಧವೂ ಈ ಅಪರಾಧವನ್ನು ಸಾಬೀತುಪಡಿಸುವಲ್ಲಿ ಸಾಧ್ಯವಾಗಿಲ್ಲ. ಸಾಕ್ಷ್ಯಾಧಾರಗಳ ಕೊರತೆ, ಗುರುತಿನ ಪರೇಡ್ ವಿಫಲತೆ, ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳು ಹೊಂದಿಕೆಯಾಗದ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಮುಂಬೈ ಸೆಷನ್ಸ್ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಎಂ.ಪಾಟೀಲ್ ಈ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ:ಶ್ರದ್ಧಾಳನ್ನು ಕೊಂದು ಮುಖ ಸುಟ್ಟು ವಿರೂಪಗೊಳಿಸಿದ್ದ ಪಾತಕಿ ಅಫ್ತಾಬ್!

ABOUT THE AUTHOR

...view details