ಚಿತ್ತೋರಗಢ:ಸಿಡಿಲಿನ ಹೊಡೆತಕ್ಕೆ ಹಿಂದೂಸ್ಥಾನ ಜಿಂಕ್ ಪ್ಲಾಂಟ್‌ನಲ್ಲಿ ಆ್ಯಸಿಡ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಮೃತಪಟ್ಟು, 9 ಮಂದಿ ಗಂಭೀರ ಸುಟ್ಟ ಗಾಯಕ್ಕೆ ತುತ್ತಾದ ದುರ್ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
ಚಿತ್ತೋರ್ಗಢ ಸಮೀಪದ ಪುಥೋಳಿಯಲ್ಲಿನ ಹಿಂದೂಸ್ತಾನ್ ಜಿಂಕ್ ಪ್ಲಾಂಟ್‌ನಲ್ಲಿ ಶುಕ್ರವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ಆ್ಯಸಿಡ್ ಟ್ಯಾಂಕ್ ಸ್ಫೋಟ ಆಗಿದೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಆ್ಯಸಿಡ್ ಭೀಕರತೆಗೆ ಸುಟ್ಟು ಮೃತಪಟ್ಟಿದ್ದಾರೆ. ಇದಲ್ಲದೇ, 9 ಮಂದಿಗೆ ಕಾರ್ಮಿಕರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ.