ಕರ್ನಾಟಕ

karnataka

ETV Bharat / bharat

ತನ್ನೊಂದಿಗೆ ಬರಲು ನಿರಾಕರಿಸಿದ ವಿವಾಹಿತ ಮಹಿಳೆ ಮೇಲೆ ಪ್ರಿಯಕರನಿಂದ ಆ್ಯಸಿಡ್ ದಾಳಿ

ಬಿಹಾರದಲ್ಲಿ ಪಾಗಲ್​ ಪ್ರೇಮಿನೊಬ್ಬ ರಾತ್ರಿ ಮಲಗಿರುವ ಸಮಯದಲ್ಲಿ ವಿವಾಹಿತ ಮಹಿಳೆಯ ಕುಟುಂಬಸ್ಥರ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದಾನೆ.

ಆಸಿಡ್​ ದಾಳಿ
ಆಸಿಡ್​ ದಾಳಿ

By

Published : May 22, 2023, 7:59 PM IST

ಮುಜಾಫರ್‌ಪುರ (ಬಿಹಾರ) :ತನ್ನೊಂದಿಗೆ ಬರುವುದಕ್ಕೆ ನಿರಾಕರಿಸಿದಕ್ಕಾಗಿ ಪಾಗಲ್ ಪ್ರೇಮಿನೊಬ್ಬ ವಿವಾಹಿತ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದಾನೆ. ಈ ಘಟನೆ ನಿನ್ನೆ (ಭಾನುವಾರ) ಪಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಾರದ ಪೂರ್ವ ಚಂಪಾರಣ್‌ನಲ್ಲಿ ನಡೆದಿದೆ. ಆ್ಯಸಿಡ್​ ದಾಳಿಯಲ್ಲಿ ಮಹಿಳೆ, ಆಕೆಯ ಪತಿ ಮತ್ತು ಇಬ್ಬರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ.

ರಾತ್ರಿ ಸಮಯದಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಮಲಗಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಪೊಲೀಸರ ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳು ಮನೆಯ ಛಾವಣಿ ಮೇಲೆ ಹತ್ತಿ ಅವರು ಮಲಗಿರುವ ಸ್ಥಳಕ್ಕೆ ಸರಿಯಾಗಿ ಛಾವಣಿ ಸರಿಸಿದಿದ್ದಾರೆ. ಬಳಿಕ ಆ ಸಂದಿ ಮೂಲಕ ಆ್ಯಸಿಡ್ ಸುರಿದಿದ್ದು, ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಆ್ಯಸಿಡ್​ ಅವರ ದೇಹವನ್ನು ಸುಡುವಾಗ ನೋವಿನಿಂದ ಕಿರುಚಿಗೊಂಡಿದ್ದಾರೆ.

ಆದರೆ ಹೊರಗೆ ಬಾಗಿಲನ್ನು ಲಾಕ್​ ಮಾಡಿರುವುದರಿಂದ ಕುಟುಂಬದ ಸಹಾಯಕ್ಕೆ ನೆರೆಹೊರೆಯವರು ತತ್​ಕ್ಷಣ ಬರಲು ಸಾಧ್ಯವಾಗಿಲ್ಲ. ಬಳಿಕ ಬಾಗಿಲನ್ನು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಮರುದಿನ ಇಂದು (ಸೋಮವಾರ) ಬೆಳಿಗ್ಗೆ ಚಿಕಿತ್ಸೆಗಾಗಿ ಅವರನ್ನು ಮೋತಿಹಾರಿಯಿಂದ ಮುಜಾಫರ್‌ಪುರ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಚಾಕು ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಯನ್ನು ಥಳಿಸಿ ಕೊಂದ ಗ್ರಾಮಸ್ಥರು

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ಆರೋಪಿ ಮಹೇಶ್ ಭಗತ್ ಎಂಬವವನು ನೀರಿನ ಗುತ್ತಿಗೆದಾರನಾಗಿದ್ದು, ತನ್ನ ಪತಿ ಅಲ್ಲಿ ಕೂಲಿ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಆರೋಪಿ ಜೊತೆ ಸಲುಗೆ ಬೆಳೆಸಿಕೊಂಡಿದ್ದೆ. ಇದಾದ ಮೇಲೆ ಮಹೇಶ ತನ್ನೊಂದಿಗೆ ಹೊರಗೆ ಹೋಗುವಂತೆ ಹೇಳುತ್ತಿದ್ದ. ಹಾಗೂ ಅವನು ನನ್ನನ್ನು ಮದುವೆಯಾಗಲು ಬಯಸಿ ತನ್ನೊಂದಿಗೆ ಬರುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದ.

ಇದರ ನಡುವೆ ಒಂದು ದಿನ ಆತ ನಕಲಿ ಮದುವೆ ಪ್ರಮಾಣ ಪತ್ರ ಸಿದ್ಧಪಡಿಸಿ ನನ್ನ ಕುಟುಂಬವನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಹೇಳಿದ್ದ. ನನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದ. ಈ ಸಂದರ್ಭದಲ್ಲಿ ನಾನು, ನನ್ನ ಪತಿ ಮತ್ತು ಮಕ್ಕಳನ್ನು ಎಂದಿಗೂ ಬಿಟ್ಟು ಬರುವುದಿಲ್ಲ ಎಂದು ಅವನ ಜೊತೆ ಹೋಗಲು ನಿರಾಕರಿಸಿದ್ದೆ. ಇದರಿಂದಾಗಿ ಆತ ನನಗೆ ಜೀವ ಬೆದರಿಕೆ ಕೂಡ ಹಾಕಿದ್ದ. ಕೊನೆಗೆ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ನನಗೆ ಮತ್ತು ನನ್ನ ಕುಟುಂಬದ ಮೇಲೆ ಆ್ಯಸಿಡ್ ಎರಚಿದ್ದಾನೆ ಎಂದು ಸಂತ್ರಸ್ತೆ ತಾವು ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ಅಲ್ಲಿನ ಪಿಪ್ರಾ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ್ಯಸಿಡ್​ ದಾಳಿ ನಡೆಸಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ :ಗಂಗಾನದಿಯಲ್ಲಿ ದೋಣಿ ಮುಳುಗಿ 4 ಸಾವು, 24 ಮಂದಿ ನಾಪತ್ತೆ: ಭೀಕರ ವಿಡಿಯೋ

ABOUT THE AUTHOR

...view details