ಕರ್ನಾಟಕ

karnataka

ETV Bharat / bharat

ಅತಿ ಹಗುರ OLED ಲ್ಯಾಪ್​ಟಾಪ್ ಏಸರ್ 'ಸ್ವಿಫ್ಟ್ ಎಡ್ಜ್' ಬಿಡುಗಡೆ - ಮೈಕ್ರೋಸಾಫ್ಟ್ ಪ್ಲುಟಾನ್ ಭದ್ರತಾ ಪ್ರೊಸೆಸರ್

ಹೊಸ ಲ್ಯಾಪ್‌ಟಾಪ್ AMD Ryzen PRO 6000 ಸರಣಿ ಮತ್ತು AMD Ryzen 6000 ಸರಣಿ ಪ್ರೊಸೆಸರ್‌ಗಳನ್ನು ಹೊಂದಿದೆ. ಹೆಚ್ಚುತ್ತಿರುವ ಅತ್ಯಾಧುನಿಕ ಸೈಬರ್ ದಾಳಿಗಳ ವಿರುದ್ಧ ರಕ್ಷಣೆ ನೀಡಲು ಮೈಕ್ರೋಸಾಫ್ಟ್ ಪ್ಲುಟಾನ್ ಭದ್ರತಾ ಪ್ರೊಸೆಸರ್ ಅನ್ನು ಒಳಗೊಂಡಿದೆ.

ಏಸರ್ ಸ್ವಿಫ್ಟ್ ಎಡ್ಜ್: ವಿಶ್ವದ ಅತಿ ಹಗುರ OLED ಲ್ಯಾಪ್​ಟಾಪ್​ ಬಿಡುಗಡೆ
Acer launches world's lightest OLED laptop

By

Published : Oct 7, 2022, 4:29 PM IST

ತೈಪೆ (ತೈವಾನ್): ತೈವಾನ್‌ನ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಏಸರ್ ಶುಕ್ರವಾರ 'ಸ್ವಿಫ್ಟ್ ಎಡ್ಜ್' ಎಂಬ ಹೆಸರಿನ ವಿಶ್ವದ ಅತ್ಯಂತ ಹಗುರವಾದ 16 ಇಂಚಿನ OLED ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಏಸರ್ ಸ್ವಿಫ್ಟ್ ಎಡ್ಜ್ ಇದೇ ತಿಂಗಳಿನಿಂದ ಅಮೆರಿಕ ಮಾರುಕಟ್ಟೆಯಲ್ಲಿ 1,499.99 ಡಾಲರ್​ಗೆ ಲಭ್ಯವಾಗಲಿದೆ. ಉತ್ಪಾದಕತೆ ಮತ್ತು ಸೃಜನಶೀಲತೆಯ ದೃಷ್ಟಿಯಿಂದ ಆಧುನಿಕ ಹೈಬ್ರಿಡ್ ಮಾದರಿಯ ಉದ್ಯೋಗದ ಅಗತ್ಯತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ಲ್ಯಾಪ್‌ಟಾಪ್ AMD Ryzen PRO 6000 ಸರಣಿ ಮತ್ತು AMD Ryzen 6000 ಸರಣಿ ಪ್ರೊಸೆಸರ್‌ಗಳನ್ನು ಹೊಂದಿದೆ. ಹೆಚ್ಚುತ್ತಿರುವ ಅತ್ಯಾಧುನಿಕ ಸೈಬರ್ ದಾಳಿಗಳ ವಿರುದ್ಧ ರಕ್ಷಣೆ ನೀಡಲು ಮೈಕ್ರೋಸಾಫ್ಟ್ ಪ್ಲುಟಾನ್ ಭದ್ರತಾ ಪ್ರೊಸೆಸರ್ ಅನ್ನು ಒಳಗೊಂಡಿದೆ. ಏಸರ್ ಸ್ವಿಫ್ಟ್ ಎಡ್ಜ್ 4K OLED ಡಿಸ್ ಪ್ಲೇ ಯನ್ನು ಹೊಂದಿದ್ದು, ಶೇ 100 ರಷ್ಟು DCI-P3 ಕಲರ್ ಬೆಂಬಲಿಸುತ್ತದೆ ಮತ್ತು ಸಿನಿಮಾ ದರ್ಜೆಯ ದೃಶ್ಯಗಳಿಗಾಗಿ 500 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ.

16-ಇಂಚಿನ ಹಗುರವಾದ ಲ್ಯಾಪ್‌ಟಾಪ್ ಕೇವಲ 1.17 ಕೆಜಿ ತೂಗುತ್ತದೆ ಮತ್ತು 12.95 ಮಿಮೀ ಎತ್ತರವಾಗಿದೆ. ಹೊಸ ಏಸರ್ ಲ್ಯಾಪ್‌ಟಾಪ್ ವಿಸ್ತೃತ ಮತ್ತು ಆರಾಮದಾಯಕ ವೀಕ್ಷಣೆಯ ಅನುಭವಕ್ಕಾಗಿ 'VESA DisplayHD True Black 500' ಮತ್ತು 'TUV ರೈನ್‌ಲ್ಯಾಂಡ್ ಐಸೇಫ್' ಪ್ರದರ್ಶನ ಪ್ರಮಾಣೀಕರಣಗಳನ್ನು ಹೊಂದಿದೆ. ಸಾಧನವು ಹೆಚ್ಚಿನ ವೇಗದ ವೈರ್‌ಲೆಸ್ ಸಂಪರ್ಕಗಳು ಮತ್ತು ಫೈಲ್ ಹಂಚಿಕೆಗಾಗಿ Wi-Fi 6E ಸೌಲಭ್ಯಗಳನ್ನು ಹೊಂದಿದೆ.

ಇದನ್ನೂ ಓದಿ: ಲ್ಯಾಪ್‌ಟಾಪ್, ಮೊಬೈಲ್ ವಶಪಡಿಸಿಕೊಳ್ಳಲು ಮಾನದಂಡ ನಿಗದಿ ಮಾಡಿದ ಹೈಕೋರ್ಟ್..

ABOUT THE AUTHOR

...view details