ಮುಕ್ತಸರ್(ಪಂಜಾಬ್): ಟ್ರಕ್ನಿಂದ ಎರಡು ಚೀಲ ಗೋಧಿ ಕದ್ದ ಆರೋಪಿಯನ್ನು ಟ್ರಕ್ ಚಾಲಕ ವಾಹನದ ಬಾನೆಟ್ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ದಿರುವ ಘಟನೆ ಪಂಜಾಬ್ನ ಮುಕ್ತಸರ್ ಜಿಲ್ಲೆಯಲ್ಲಿ ನಡೆದಿದೆ.
ಗೋಧಿ ಚೀಲ ಕದ್ದ ಆರೋಪಿಯನ್ನ ಟ್ರಕ್ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆದೊಯ್ದ ಚಾಲಕ..! - etv bharat kannada
ಪಂಜಾಬ್ನಲ್ಲಿ ಗೋದಿ ಚೀಲ ಕದ್ದ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗೋಧಿ ಚೀಲ ಕದ್ದ ಆರೋಪಿಯನ್ನು ಟ್ರಕ್ ಬಾನೆಟ್ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ದ ಚಾಲಕ....!
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಎರಡು ವಿಡಿಯೋಗಳು ಸಿಕ್ಕಿವೆಯಂತೆ. ಒಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟ್ರಕ್ನಿಂದ ಗೋಧಿ ಚೀಲ ಕದಿಯುತ್ತಿರುವುದನ್ನು ತೋರಿಸಿದರೆ, ಮತ್ತೊಂದು ವಿಡಿಯೋದಲ್ಲಿ ಅದೇ ವ್ಯಕ್ತಿಯನ್ನು ಚಾಲಕ ಟ್ರಕ್ನ ಬಾನೆಟ್ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ:ಬನ್ನೇರುಘಟ್ಟದ ಬೂತಾನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ