ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26 ಗಣರಾಜ್ಯೋತ್ಸವದ ಹಿಂಸಾಚಾರದ ಆರೋಪಿ ಸುಖದೇವ್ ಸಿಂಗ್ ಘಟನೆಯ ನಂತರ ಸಿಂಗ್ ಗಡಿಗೆ ಭೇಟಿ ನೀಡಿ ನಂತರ ಪಂಜಾಬ್‌ಗೆ ತೆರಳಿದ್ದ ಎಂದು ದೆಹಲಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕೆಂಪು ಕೋಟೆ ಹಿಂಸಾಚಾರದ ನಂತರ ಪಂಜಾಬ್, ಸಿಂಘು ಗಡಿಗೆ ಸುಖದೇವ್ ಸಿಂಗ್ ಭೇಟಿ: ದೆಹಲಿ ಪೊಲೀಸ್
ಗಣರಾಜ್ಯೋತ್ಸವದ ಹಿಂಸಾಚಾರದ ನಂತರ ಆರೋಪಿ ಸುಖದೇವ್ ಸಿಂಗ್ ಸಿಂಘು ಬಾರ್ಡರ್ ಮತ್ತು ಪಂಜಾಬ್‌ಗೆ ಭೇಟಿ ನೀಡಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರು ಭಾನುವಾರ ಚಂಡೀಗಢದಲ್ಲಿ ಸುಖದೇವ್ ಸಿಂಗ್ನನ್ನು ಬಂಧಿಸಿದ್ದರು. ಹಿಂಸಾಚಾರದ ದಿನ ರಾತ್ರಿ 10 ಗಂಟೆಯವರೆಗೆ ಸುಖದೇವ್ ಸಿಂಗ್ ಕೆಂಪು ಕೋಟೆಯಲ್ಲಿದ್ದು, ತಡರಾತ್ರಿ ಸಿಂಘುಗಡಿಗೆ ಹೋಗಿದ್ದನಂತೆ. ವಿಶೇಷವೆಂದರೆ ಸಿಂಗ್ ಕೆಂಪು ಕೋಟೆಯಲ್ಲಿ ಗಲಭೆಯಲ್ಲಿ ಪಾಲ್ಗೊಂಡ ಜನರನ್ನು ಮುನ್ನಡೆಸಿದ್ದು, ಹಿಂಸಾಚಾರದಲ್ಲಿ ಈತನ ಪಾತ್ರ ಸಕ್ರಿಯವಾಗಿದೆ.
ಗಣರಾಜ್ಯೋತ್ಸವದಂದು, ಪ್ರತಿಭಟನಾಕಾರರು ಮೊದಲೇ ನಿಗದಿಪಡಿಸಿದ ಮಾರ್ಗವನ್ನು ಅನುಸರಿಸಲಿಲ್ಲ. ದೆಹಲಿಗೆ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಮುರಿದು, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ರೈತರ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿದ್ದರು. ಕೆಂಪು ಕೋಟೆಯನ್ನು ಪ್ರವೇಶಿಸಿ ಇತರ ಧ್ವಜಗಳನ್ನು ಹಾರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.