ಕರ್ನಾಟಕ

karnataka

ETV Bharat / bharat

ಆಕಾಂಕ್ಷ ದುಬೆ ಆತ್ಮಹತ್ಯೆ ಪ್ರಕರಣ: ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ಕೋರ್ಟ್‌ಗೆ ಹಾಜರು - etv bharat kannada

ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಸಾವು ಪ್ರಕರಣದ ಆರೋಪಿ ಸಮರ್ ಸಿಂಗ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದ್ದರು.

accused-singer-samar-singh-to-appear-before-court-through-video-conference
ಆಕಾಂಕ್ಷ ದುಬೆ ಆತ್ಮಹತ್ಯೆ ಪ್ರಕರಣ: ಆರೋಪಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು

By

Published : Apr 11, 2023, 6:30 PM IST

ವಾರಣಾಸಿ (ಉತ್ತರ ಪ್ರದೇಶ): ಭೋಜ್​​ಪುರಿ ನಟಿ ಅಕಾಂಕ್ಷ ದುಬೆ ಆತ್ಮಹತ್ಯೆಗೆ ಪ್ರಕರಣದಲ್ಲಿ ಬಂಧಿತ ಆರೋಪಿ, ಗಾಯಕ ಸಮರ ಸಿಂಗ್ ಅವರು​​ ತಮ್ಮ ವಕೀಲರ ಮೂಲಕ ವಿಡಿಯೋ ಕಾನ್ಫರೆನ್ಸ್​​ ವಿಚಾರಣೆ ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿ ಸ್ವೀಕರಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಸಮರ್​ ಸಿಂಗ್​ ಮಂಗಳವಾರ ಮಧ್ಯಾಹ್ನ 2 ಗಂಟೆ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಇದಕ್ಕಾಗಿ ಅವರನ್ನು ಜಿಲ್ಲಾ ಕಾರಾಗೃಹದಿಂದ ಕರೆತರಬೇಕಿತ್ತು. ಆದರೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ವಿಚಾರಣೆ ನಡೆಸುವಂತೆ ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕರಿಸಿದ ನ್ಯಾಯಲಯವು ಮಂಗಳವಾರ ಮಧ್ಯಾಹ್ನ 2.15ಕ್ಕೆ ಸಮರ್​​ ಸಿಂಗ್​ ಅವರನ್ನು ವಿಡಿಯೋ ಕಾನ್ಫರೆನ್ಸ್​​​ ಮೂಲಕ ಹಾಜರುಪಡಿಸುವಂತೆ ಆದೇಶ ನೀಡಿದೆ.

ಏಪ್ರಿಲ್​ 7 ರಂದು ಸಮರ್​​ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದರು. ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಕೋಲಾಹಲ ಉಂಟಾಗಿತ್ತು. ಇದು ಮತ್ತೆ ಪುನರಾವರ್ತನೆಯಾಗಬಹುದು ಮತ್ತು ಗದ್ದಲ ಉಂಟಾಗಬಹುದು ಎಂಬ ಆತಂಕದಿಂದ ಸಮರ್​ ಸಿಂಗ್‌ ವಿಡಿಯೋ ಕಾನ್ಫರೆನ್ಸ್​​​ ಮೂಲಕ ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?:ಮಾರ್ಚ್ 25 ರಂದು ನಟಿ ಆಕಾಂಕ್ಷಾ ದುಬೆ ಅವರ ಮೃತದೇಹವು ವಾರಣಾಸಿಯ ಸಾರನಾಥ್ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೋಟೆಲ್​ನವರು ಮಾಸ್ಟರ್ ಕೀ ಬಳಸಿ ಹೋಟೆಲ್ ರೂಂ ತೆರೆದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಎರಡು ದಿನಗಳ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆಕಾಂಕ್ಷಾ ದುಬೆ ಅವರ ತಾಯಿ ಮಧು ದುಬೆ ಅವರು ಭೋಜ್‌ಪುರಿ ಗಾಯಕ ಸಮರ್ ಸಿಂಗ್ ಮತ್ತು ಆತನ ಸಹೋದರ ಸಂಜಯ್ ಸಿಂಗ್ ತನ್ನ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದ್ದರು. ಅವರಿಬ್ಬರು ನನ್ನ ಮಗಳನ್ನು ಕೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಲುಕೌಟ್ ನೋಟಿಸ್:ಆತ್ಮಹತ್ಯೆ ಪ್ರಕರಣದಲ್ಲಿತಲೆಮರೆಸಿಕೊಂಡಿದ್ದಸಮರ್​ ಸಿಂಗ್​ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಪೊಲೀಸರು ಎಲ್ಲೆಡೆ ಶೋಧ ನಡೆಸಿದರೂ ಯಾವುದೇ ಪ್ರಯೋಜನಗಳ ಆಗಿರಲಿಲ್ಲ. ಕೊನೆಗೆ ಆರೋಪಿ ಗಾಜಿಯಾಬಾದ್‌ನಲ್ಲಿ ತಲೆಮರೆಸಿಕೊಂಡಿರುವುದು ತಿಳಿದಿತ್ತು. ಏಪ್ರಿಲ್​ 7 ರಂದು ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ:ಮಿಕಾಸಿಂಗ್​ ಕಿಸ್​ ಪ್ರಕರಣ: ಅಫಿಡವಿಟ್​ ಸಲ್ಲಿಸುವಂತೆ ರಾಖಿ ಸಾವಂತ್​ಗೆ ಹೈಕೋರ್ಟ್​ ಸೂಚನೆ

ABOUT THE AUTHOR

...view details