ಪಾಣಿಪತ್ (ಹರಿಯಾಣ):ದೀಪಾವಳಿಯ ರಾತ್ರಿ 7 ವರ್ಷದ ಬಾಲಕಿಯ ಮೃತದೇಹ ಪಾಣಿಪತ್‌ನ ಆಕೆಯ ಮನೆಯ ಹಿಂದಿನ ಪೊದೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸಿ ತಿಳಿಸಿದ್ದಾರೆ.
ಯಮುನಾ ನಗರ ಮೂಲದ ಯೋಗೇಶ್ ಅಲಿಯಾಸ್ ಶಿವಕುಮಾರ್ ಎಂಬಾತ ಬಾಲಕಿಯನ್ನು ಅಮಾನವೀಯವಾಗಿ ಕೊಲೆಗೈದ ಆರೋಪಿ. ಈತನನ್ನು ಕೋಲ್ಕತ್ತಾದ ಹೌರಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಾಂತ್ರಿಕ ಕಲಿಕೆಯಲ್ಲಿ ಪ್ರವೀಣರಾಗಲು ಅಮಾಯಕ ಕಂದಮ್ಮನ್ನು ಬಲಿ ನೀಡಿದ್ದರು ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.