ಕರ್ನಾಟಕ

karnataka

ETV Bharat / bharat

ನಕ್ಸಲರಿಂದ ಇಬ್ಬರ ಹತ್ಯೆ.. ಪೊಲೀಸರಿಗೆ ಮಾಹಿತಿ ನೀಡುವವರು ಶರಣಾಗುವಂತೆ ಆಗ್ರಹ..! - ಒಡಿಶಾದ ಭುವನೇಶ್ವರ ಜಿಲ್ಲೆ

20ರ ಸೆಪ್ಟೆಂಬರ್​ನಲ್ಲಿ ಇವರಿಬ್ಬರು ನಮ್ಮ ಐವರು ಸಹೋದ್ಯೋಗಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಅವರು ಪೊಲೀಸರ ಗುಂಡೇಟಿಗೆ ಬಲಿಯಾದರು ಎಂದು ಬರೆದಿರುವ ಪತ್ರವನ್ನು ಶವದ ಬಳಿ ಬಿಸಾಡಿ ಹೋಗಿದ್ದಾರೆ. ಅಲ್ಲದೇ, ಪೊಲೀಸರಿಗೆ ಮಾಹಿತಿ ನೀಡುವವರು ಇನ್ನು 15 ದಿನಗಳಲ್ಲಿ ಶರಣಾಗಬೇಕು ಇಲ್ಲವಾದರೆ ಅವರಿಗೂ ಇದೇ ಶಿಕ್ಷೆ ಎಂದೂ ಬರೆದಿದ್ದಾರೆ.

Odisha
ಭುವನೇಶ್ವರ

By

Published : Jan 30, 2021, 5:28 PM IST

ಭುವನೇಶ್ವರ: ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದಡಿ ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪು ಇಬ್ಬರು ಗ್ರಾಮಸ್ಥರನ್ನು ಹತ್ಯೆ ಮಾಡಿದೆ. ಶುಕ್ರವಾರ ರಾತ್ರಿ ಜಿಲ್ಲೆಯ ಬೆಲಘರ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇಬ್ಬರ ಶವಗಳು ಪ್ರತ್ಯೇಕ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 2020 ರ ಸೆಪ್ಟೆಂಬರ್​ನಲ್ಲಿ ಇವರಿಬ್ಬರು ನಮ್ಮ ಐವರು ಸಹೋದ್ಯೋಗಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಅವರು ಪೊಲೀಸರ ಗುಂಡೇಟಿಗೆ ಬಲಿಯಾದರು ಎಂದು ಬರೆದಿರುವ ಪತ್ರವನ್ನು ಶವದ ಬಳಿ ಬಿಸಾಡಿ ಹೋಗಿದ್ದಾರೆ. ಅಲ್ಲದೇ, ಪೊಲೀಸರಿಗೆ ಮಾಹಿತಿ ನೀಡುವವರು ಇನ್ನು 15 ದಿನಗಳಲ್ಲಿ ಶರಣಾಗಬೇಕು ಇಲ್ಲವಾದರೆ ಅವರಿಗೂ ಇದೇ ಶಿಕ್ಷೆ. ಇದಕ್ಕೆಲ್ಲ ಒಡಿಶಾ ಡಿಜಿ ಅಭಯ್​ ಮತ್ತು ಗುಪ್ತಚರ ಇಲಾಖೆಯ ಐಜಿ ಆರ್.ಕೆ.ಶರ್ಮಾರೇ ನೇರ ಹೊಣೆ ಎಂದು ಬರೆದಿದ್ದಾರೆ.

ಬನ್ಸಾಧರ-ಘುಮ್ಸರ್-ನಾಗಬಾಲಿ ವಿಭಾಗಕ್ಕೆ ಸೇರಿದ ನಕ್ಸಲರು ಎಂದು ತಿಳಿದು ಬಂದಿದೆ.

ABOUT THE AUTHOR

...view details