ಮುಂಬೈ: ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಅಕ್ಟೋಬರ್ 7 ರವರೆಗೆ ಎನ್‌ಸಿಬಿ ವಶಕ್ಕೆ ಪಡೆದಿದೆ.
ಎನ್‌ಸಿಬಿ ಸೋಮವಾರ ತಡರಾತ್ರಿ ಆರ್ಯನ್ ಮತ್ತು ಇತರ ಆರೋಪಿಗಳನ್ನು ಪ್ರಕರಣದ ಬಗ್ಗೆ ಪ್ರಶ್ನೆಗಳ ಸರಮಾಲೆಯನ್ನು ಹಾಕಿದ್ದು, ಅವರಿಂದ ಉತ್ತರ ಪಡೆದುಕೊಂಡಿದೆ. ಇನ್ನು ಅವರಿಗೆ ಎನ್‌ಸಿಬಿ ಕಚೇರಿ ಬಳಿಯ ರಸ್ತೆಬದಿಯ ಸ್ಟಾಲ್‌ನಿಂದ ತಂದ ಪೂರಿ, ಭಾಜಿ, ಬಿರಿಯಾನಿಯನ್ನ ಊಟಕ್ಕೆ ನೀಡಿದೆ.
ಇಂದು ಬೆಳಗ್ಗೆ ಕುಟುಂಬವು ಮೆಕ್‌ಡೊನಾಲ್ಡ್ಸ್ ಬರ್ಗರ್ ಅನ್ನು ಕಳುಹಿಕೊಟ್ಟಿತು ಆದರೆ, ಪೊಲೀಸರು ಇದನ್ನು ನೀಡಲು ನಿರಾಕರಿಸಿದರು. ನಿನ್ನೆ ಫೋರ್ಟ್ ಕೋರ್ಟ್ನಲ್ಲಿ, ಅರ್ಬಾಜ್ ತಂದೆ ಆತನಿಗಾಗಿ ಮನೆಯಲ್ಲಿ ಮಾಡಿದ ಊಟ ತಂದಿದ್ದರು. ಅವರು ಅರ್ಬಾಜ್ಗೆ ಊಟ ನೀಡಿದರು. ಅವರು ಕಾರಿಡಾರ್‌ನಲ್ಲಿ ಕುಳಿತು ತಿನ್ನುತ್ತಿದ್ದರು. ಆದರೆ, ಶಾರುಖ್ ಅವರ ಮಗ ಆರ್ಯನ್ ಮನೆಯಲ್ಲಿ ಮಾಡಿದ ಊಟವನ್ನು ನಿರಾಕರಿಸಿದ್ದರು.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಸೇರಿದಂತೆ 11 ಜನರನ್ನು ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಂಧಿಸಲಾಗಿದೆ.
ಓದಿ:ಶಾರುಖ್ ಪುತ್ರನ ಕೇಸ್ ನಡೆಸ್ತಿದಾರೆ ಧಾರವಾಡದ ವಕೀಲ.. ಆರ್ಯನ್ಗೆ ಸಿಗುತ್ತಾ ರಿಲೀಫ್?