ಕರ್ನಾಟಕ

karnataka

ETV Bharat / bharat

ಕತ್ತಿನಿಂದ ಮುಖದೊಳಗೆ ನುಗ್ಗಿ ಹೊರ ಬಂದ ರಾಡ್​.. ಸಾವು ಗೆದ್ದು ಬಂದ ಯುವಕ! - ವಿಶಾಖಪಟ್ಟಣ ಸುದ್ದಿ

ಯುವಕನೊಬ್ಬ ಕೆಲಸ ಮಾಡುತ್ತಿದ್ದಾಗ ಕೆಳಗೆ ಜಾರಿ ಬಿದ್ದ ಪರಿಣಾಮ ಕತ್ತಿನಿಂದ ಮುಖದೊಳಗೆ ಕಬ್ಬಿಣದ ರಾಡ್​ ನುಗ್ಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

Accidently iron rod pierced, Accidently iron rod pierced through Young man neck, Visakhapatnam news, Visakhapatnam latest news, ಕತ್ತಿನಿಂದ ಮುಖದೊಳಗೆ ಹಾರುಪಾರಾದ ಕಬ್ಬಿಣದ ರಾಡ್, ವಿಶಾಖಪಟ್ಟಣದಲ್ಲಿ ಕತ್ತಿನಿಂದ ಮುಖದೊಳಗೆ ಹಾರುಪಾರಾದ ಕಬ್ಬಿಣದ ರಾಡ್, ವಿಶಾಖಪಟ್ಟಣ ಸುದ್ದಿ,
ಕತ್ತಿನಿಂದ ಮುಖದೊಳಗೆ ನುಗ್ಗಿ ಹೊರ ಬಂದ ಕಬ್ಬಿಣದ ರಾಡ್

By

Published : Mar 17, 2021, 8:22 AM IST

Updated : Mar 17, 2021, 8:44 AM IST

ವಿಶಾಖಪಟ್ಟಣ: ಯುವಕನೊಬ್ಬ ಕೆಲಸ ವೇಳೆ ಆಯತಪ್ಪಿ ಕೆಳಗೆ ಬಿದ್ದಾಗ ಆತನ ಕತ್ತಿನಿಂದ ಮುಖದೊಳಗೆ ಕಬ್ಬಿಣದ ರಾಡ್​ ಸಿಲುಕಿದ್ದ ಘಟನೆ ಇಲ್ಲಿನ ಅಂಗನಂಪೂಡಿ ಹೋಮಿ ಬಾಬಾ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರಪ್ರದೇಶ ನಿವಾಸಿ ರಾಹುಲ್​

ಉತ್ತರಪ್ರದೇಶದ ನಿವಾಸಿ ಎಂ. ರಾಹುಲ್ ಸಿವಾಕ್​​ (22) ಪ್ರವೈಟ್​ ಬಿಲ್ಡಿಂಗ್​ ಸರ್ವಿಸಸ್​ ಕಂಪನಿಯಲ್ಲಿ ಎಲಕ್ಟ್ರಿಕಲ್​ ಕೆಲಸ ಮಾಡುತ್ತಿದ್ದ. ಸೋಮವಾರ ಸಂಜೆ ಕೆಲಸದ ವೇಳೆ ಮೇಲಿಂದ ಜಾರಿ ಕಬ್ಬಿಣದ ರಾಡ್​ಗಳ ರಾಶಿ ಮೇಲೆ ಬಿದ್ದಿದ್ದಾನೆ. ಇದರಲ್ಲೊಂದು ಕಬ್ಬಿಣದ ರಾಡ್​ ಆತನ ಕತ್ತಿನಿಂದ ಎಡಗಣ್ಣು ಕೆಳ ಭಾಗದಿಂದ ನುಗ್ಗಿದೆ.

ಇದನ್ನು ನೋಡಿದ ಸ್ಥಳೀಯರು ಕೂಡಲೇ ರಾಹುಲ್​ನನ್ನು ಗಾಜುವಾಕದ ಆರ್​ಕೆ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ದಂತ ವೈದ್ಯರಾದ ಟಿ.ಸುನೀಲ್​, ಈಎನ್​ಟಿ ಸರ್ಜನ್​ ಡಾಕ್ಟರ್​ ಜಿ. ರಾಕೇಶ್​, ಡಾಕ್ಟರ್​ ಕೃಷ್ಣಮೂರ್ತಿಯ ವೈದ್ಯರ ತಂಡ ಎರಡೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ರಾಡ್​ ಅನ್ನು ಹೊರ ತೆಗೆದಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ರಾಡ್​ ಹೊರ ತೆಗೆದಿದ್ದೇವೆ. ಯುವಕನಿಗೆ ಯಾವುದೇ ಪ್ರಾಣ ಹಾನಿ ಇಲ್ಲ. ಇನ್ನೊಂದು ವಾರದಲ್ಲಿ ಯುವಕ ಚೇತರಿಸಿಕೊಳ್ಳುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

Last Updated : Mar 17, 2021, 8:44 AM IST

ABOUT THE AUTHOR

...view details