ಕರ್ನಾಟಕ

karnataka

ETV Bharat / bharat

ಸಾರಿಗೆ ಬಸ್ - ಕಾರು ನಡುವೆ ಮುಖಾಮುಖಿ ಡಿಕ್ಕಿ: ಕಾರಿನಲ್ಲಿದ್ದ ಐವರು ಯುವಕರ ದಾರುಣ ಸಾವು - ಹರಿಯಾಣ ರೋಡ್‌ವೇಸ್ ಬಸ್

ಹರಿಯಾಣ ಸಾರಿಗೆ ಬಸ್ ಹಾಗೂ ಬ್ರೆಝಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಐವರು ಯುವಕರು ಸಾವಿಗೀಡಾಗಿದ್ದಾರೆ.

accident-on-delhi-jaipur-highway-in-rewari-5-people-died
ಸಾರಿಗೆ ಬಸ್ - ಕಾರು ನಡುವೆ ಮುಖಾಮುಖಿ ಡಿಕ್ಕಿ: ಕಾರಿನಲ್ಲಿದ್ದ ಐವರು ಯುವಕರ ದಾರುಣ ಸಾವು

By

Published : Sep 28, 2022, 7:35 PM IST

ರೇವಾರಿ (ಹರಿಯಾಣ): ಕಾರು ಮತ್ತು ಸಾರಿಗೆ ಬಸ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಐವರು ಯುವಕರು ಮೃತಪಟ್ಟು, ಇತರ ಹತ್ತ ಜನರು ಗಾಯಗೊಂಡಿರುವ ಘಟನೆ ಹರಿಯಾಣದ ರೇವಾರಿ ಜಿಲ್ಲೆಯ ದೆಹಲಿ ಮತ್ತು ಜೈಪುರ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಇಲ್ಲಿನ ಸಲ್ಹಾವಾಸ್ ಕಟ್‌ನಲ್ಲಿ ಹರಿಯಾಣ ರೋಡ್‌ವೇಸ್ ಬಸ್ ಹಾಗೂ ಬ್ರೆಝಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಈ ದುರಂತ ನಡೆದಿದೆ. ಇದರ ಪರಿಣಾಮ ಬ್ರೆಝಾ ಕಾರಿನಲ್ಲಿದ್ದ 5 ಮಂದಿ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ಮಹೇಶ್ (23), ಸಚಿನ್ (25), ಸೋನು (24), ಕಪಿಲ್ (20), ನಿತೇಶ್ (21) ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.

ಇತ್ತ, ಈ ಅವಘಡ ಸಂಭವಿಸಿದಾಗ ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು. ಇದರಿಂದ ಬಸ್‌ನಲ್ಲಿದ್ದ 10 ಪ್ರಯಾಣಿಕರು ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರೇವಾರಿಯ ಟ್ರಾಮಾ ಸೆಂಟರ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗದ ಭಾಗವೂ ಜಖಂಗೊಂಡಿದೆ.

ಮಧ್ಯಾಹ್ನ 2.30ರ ಸುಮಾರಿಗೆ ಬ್ರೆಝಾ ಕಾರು ದೆಹಲಿಯಿಂದ ಜೈಪುರಕ್ಕೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಸೋನೆಪತ್ ಡಿಪೋದ ಸಾರಿಗೆ ಬಸ್ ಜೈಪುರದಿಂದ ದೆಹಲಿ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಆಟವಾಡುತ್ತಿದ್ದ ಬಾಲಕಿ ಅಪಹರಿಸಿ ಕೊಲೆ: ಬಿಡುವಂತೆ ಸ್ಥಳೀಯರು ಕೂಗಿದರೂ ಕೇಳದ ಹಂತಕ..ವಿಡಿಯೋ

ABOUT THE AUTHOR

...view details