ಕರ್ನಾಟಕ

karnataka

ETV Bharat / bharat

ಕಾರು ಅಪಘಾತ: ಬಾಲಿವುಡ್​ ನಟಿ ಮಲೈಕಾ ಅರೋರಾ ತಲೆಗೆ ಗಾಯ - Accident of Actros Malaika Arora's vehicle

ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಾಲಿವುಡ್​ ನಟಿ ಮಲೈಕಾ ಅರೋರಾ ಅವರ ಕಾರು ಅಪಘಾತಕ್ಕೀಡಾಗಿ ನಟಿ ತಲೆಗೆ ಪೆಟ್ಟು ಗಾಯಗೊಂಡ ಘಟನೆ ನಡೆದಿದೆ. ನವಿಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ctros-malai
ಮಲೈಕಾ ಅರೋರಾ

By

Published : Apr 2, 2022, 8:53 PM IST

Updated : Apr 2, 2022, 9:33 PM IST

ಮುಂಬೈ:ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪರವಾಗಿ ಪ್ರಚಾರಕ್ಕೆ ತೆರಳುತ್ತಿದ್ದಾಗ ಬಾಲಿವುಡ್​ ನಟಿ ಮಲೈಕಾ ಅರೋರಾ ಅವರ ಕಾರು ಅಪಘಾತಕ್ಕೀಡಾಗಿ ನಟಿ ತೀವ್ರ ಗಾಯಗೊಂಡ ಘಟನೆ ಪುಣೆಯಲ್ಲಿ ಇಂದು ನಡೆದಿದೆ.

ಕಾರು ಅಪಘಾತ: ಬಾಲಿವುಡ್​ ನಟಿ ಮಲೈಕಾ ಅರೋರಾ ತಲೆಗೆ ಗಾಯ

ಪುಣೆಯ ಪನ್ವೇಲ್​ ಬಳಿ ನಟಿಯ ಕಾರು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಎಂಎನ್‌ಎಸ್ ಪದಾಧಿಕಾರಿಗಳ ಮೂರ್ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ನಟಿ ಮಲೈಕಾ ಅರೋರಾ ತಲೆಗೆ ಗಾಯವಾಗಿದ್ದು, ಹೆಚ್ಚಿನ ರಕ್ತಸ್ರಾವವಾಗಿದೆ. ತಕ್ಷಣವೇ ನಟಿಯನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪ್ರಧಾನ ಕಾರ್ಯದರ್ಶಿ ಜಯರಾಜ್ ಲಾಂಡಾ ಅವರ ಕಾರಿನಲ್ಲಿ ಕರೆತಂದು ನವಿಮುಂಬೈ ಆಸ್ಪತ್ರೆಗೆ ದಾಖಲಿಸಲಾಯಿತು.

ಈಗ ಅವರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಓದಿ:ತರಂಗ ವಿಶ್ವ ಅಭಿನಯದ ಗಿರ್ಕಿ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ

Last Updated : Apr 2, 2022, 9:33 PM IST

ABOUT THE AUTHOR

...view details