ಹೈದರಾಬಾದ್:ವಾಹನ ಓಡಿಸುವ ವೇಳೆ ನಡೆಯುವ ಸಣ್ಣ-ಪುಟ್ಟ ತಪ್ಪು ಹಾಗೂ ನಿರ್ಲಕ್ಷ್ಯದಿಂದಾಗಿ ಅನೇಕ ಅಪಘಾತಗಳು ಸಂಭವಿಸಿ, ಜೀವ ಕಳೆದುಕೊಂಡಿರುವ ಘಟನೆ ನಡೆದಿವೆ. ಸದ್ಯ ಅಂತಹದೊಂದು ಪ್ರಕರಣ ಹೈದರಾಬಾದ್ನ ಗಚ್ಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೈದರಾಬಾದ್ ಗಚ್ಚಿಬೌಲಿಯ ಗೌಲಿಡೋಡಿಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ತಪ್ಪಾದ ಮಾರ್ಗದಲ್ಲಿ ಬಂದ ಮಹೀಂದ್ರಾ ಮತ್ತೊಂದು ಬದಿಯ ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಎರಡು ಕಾರುಗಳ ಮಧ್ಯೆ ನಡೆದಿರುವ ಅಪಘಾತ ಮಾತ್ರ ಭೀಕರವಾಗಿದೆ.