ಜೈಪುರ್:ಲಂಚ ಪಡೆದು ಆರೋಪದ ಮೇಲೆ ಐಪಿಎಸ್ ಅಧಿಕಾರಿಯ ಬಂಧನ ಮಾಡುವಲ್ಲಿ ಎಸಿಬಿ ಯಶಸ್ವಿಯಾಗಿದ್ದು, ಮನೀಷ್ ಅಗರವಾಲ್ ಬಂಧಿತ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಲಂಚ ಪಡೆದ ಆರೋಪ: ಎಸಿಬಿಯಿಂದ ಐಪಿಎಸ್ ಅಧಿಕಾರಿ ಅರೆಸ್ಟ್! - Manish Agarwal
ಲಂಚ ಪಡೆದುಕೊಂಡಿರುವ ಆರೋಪದ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಐಪಿಎಸ್ ಅಧಿಕಾರಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Manish Agarwal
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಪರವಾಗಿ ಕಟ್ಟಡ ನಿರ್ಮಾಣ ಕಂಪನಿಯೊಂದರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ಜ.13ರಂದು ಪೆಟ್ರೋಲ್ ಪಂಪ್ ಮಾಲೀಕ ನೀರಜ್ ಮೀನ ಎಂಬುವವರನ್ನ ಬಂಧನ ಮಾಡಲಾಗಿತ್ತು. ಈ ವೇಳೆ ವಿಚಾರಣ ನಡೆಸಿದಾಗ ಐಪಿಎಸ್ ಅಧಿಕಾರಿ ಕೈವಾಡ ಇರುವುದು ಬಹಿರಂಗಗೊಂಡಿತ್ತು.
2010ರ ಬ್ಯಾಚನ್ ಐಪಿಎಸ್ ಅಧಿಕಾರಿ ಮನೀಷ್ ಅಗರವಾಲ್ ಅವರನ್ನ ಬಂಧನ ಮಾಡಲಾಗಿದ್ದು, ಇವರು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.