ಕರ್ನಾಟಕ

karnataka

ETV Bharat / bharat

ಜೂನ್ 1ರಿಂದ ಡಿಜಿಟಲ್ ಮಾದರಿಯ 2021- 22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ

ಕಳೆದ ವರ್ಷದ ಅಂತ್ಯದ ಪಾಠಗಳು ಈ ವರ್ಷದ ಮೊದಲ ವಾರದಲ್ಲಿ ಮತ್ತೆ ಪುನರಾವರ್ತಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ.

2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ
2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ

By

Published : May 27, 2021, 6:38 PM IST

ತಿರುವನಂತಪುರಂ (ಕೇರಳ):ಜೂನ್​ 1ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಮಾಡಲಿದ್ದೇವೆ ಎಂದು ಶಿಕ್ಷಣ ಸಚಿವ ವಿ. ಶಿವಕುಟ್ಟಿ ಮಾಹಿತಿ ನೀಡಿದ್ದಾರೆ. ಆದರೆ, ಈ ತರಗತಿಗಳು ಡಿಜಿಟಲ್ ಮಾದರಿಯಲ್ಲಿ ಮಾತ್ರ ಇರಲಿದೆ ಎಂದಿದ್ದಾರೆ.

ಕೆಐಟಿಇ ಚಾನೆಲ್ ಮೂಲಕ ತರಗತಿ ಪ್ರಸಾರವಾಗಲಿದ್ದು, ಕಳೆದ ವರ್ಷದ ಅಂತ್ಯದ ಪಾಠಗಳು ಈ ವರ್ಷದ ಮೊದಲ ವಾರದಲ್ಲಿ ಮತ್ತೆ ಪುನರಾವರ್ತಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ.

ಈ ತರಗತಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪುಸ್ತಕಗಳನ್ನು ಶನಿವಾರ ವಿತರಿಸಲಾಗುವುದು. ದ್ವಿತಿಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆಯು ಜೂನ್ 1ರಿಂದ ಆರಂಭಗೊಳ್ಳಲಿದ್ದು, 19ಕ್ಕೆ ಅಂತ್ಯವಾಗಲಿದೆ. ಹಾಗೆಯೆ ಎಸ್​ಎಸ್​ಎಲ್​ಸಿ ಮೌಲ್ಯಮಾಪನವು ಜೂನ್​ 7ಕ್ಕೆ ಆರಂಭಗೊಂಡು, 25ಕ್ಕೆ ಅಂತ್ಯವಾಗಲಿದೆ. ಪ್ರಾಯೋಗಿಕ ಪರೀಕ್ಷೆಯೂ ಜೂನ್​ 11ರಿಂದ ಜುಲೈ 7ರ ವರೆಗೆ ನಡೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಹಣ ಮರುಪಾವತಿಗೆ ನಕಾರ: ಪ್ರತಿಭಟನೆ ಮಾಡಿದ ಜಾಧವ್ ಭಾವೆ ಬಂಧನ

ABOUT THE AUTHOR

...view details