ಕರ್ನಾಟಕ

karnataka

ETV Bharat / bharat

ಮನೆಯಲ್ಲಿ ಮಲಗಿದ್ದಾಗ ಎಸಿ ಸ್ಫೋಟ: ನವ ವಿವಾಹಿತ ಸುಟ್ಟು ಕರಕಲು - Perambur of Chennai

ಎಸಿ ಸ್ಫೋಟಗೊಂಡು ನವ ವಿವಾಹಿತನೋರ್ವ ಮಲಗಿದ್ದಲ್ಲೇ ಸುಟ್ಟು ಕರಕಲಾಗಿರುವ ದುರಂತ ಚೆನ್ನೈನಲ್ಲಿ ಸಂಭವಿಸಿದೆ.

ac-exploded-newly-married-youth-died
ಮನೆಯಲ್ಲಿ ಮಲಗಿದ್ದಾಗ ಎಸಿ ಸ್ಪೋಟ: ನವ ವಿವಾಹಿತ ಸುಟ್ಟು ಕರಕಲು

By

Published : Aug 2, 2022, 5:42 PM IST

Updated : Aug 2, 2022, 5:54 PM IST

ಚೆನ್ನೈ (ತಮಿಳುನಾಡು): ಮನೆಯಲ್ಲಿ ರಾತ್ರಿ ಮಲಗಿದ್ದಾಗ ಎಸಿ ಸ್ಫೋಟಗೊಂಡು ನವ ವಿವಾಹಿತನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 28 ವರ್ಷದ ಶ್ಯಾಮ್​ ಎಂಬಾತನೇ ಮೃತ ದುರ್ದೈವಿ.

ಮನೆಯಲ್ಲಿ ಮಲಗಿದ್ದಾಗ ಎಸಿ ಸ್ಪೋಟ: ನವ ವಿವಾಹಿತ ಸುಟ್ಟು ಕರಕಲು

ಇಲ್ಲಿನ ಪೆರಂಬೂರ್​ನ ಮನವಲನ್​ ಬಡಾವಣೆಯ ನಿವಾಸಿಯಾದ ಶ್ಯಾಮ್​ ತಮ್ಮ ಮನೆಯ ಕೆಳ ಮಹಡಿಯಲ್ಲಿ ರವಿವಾರ ಮಲಗಿದ್ದರು. ತಂದೆ ಪ್ರಭಾಕರನ್​ ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಆದರೆ, ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ತಂದೆ ಕೆಳಗಡೆ ಓಡಿ ಬಂದಿದ್ದಾರೆ. ಆಗ ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಪ್ರಭಾಕರನ್​ ಬಾಗಿಲು ಮುರಿದು ಒಳಹೋಗಿ ನೋಡಿದರೆ, ಎಸಿ ಸ್ಫೋಟದಿಂದ ಮಗ ಶ್ಯಾಮ್​ ಸುಟ್ಟು ಕರಕಲಾಗಿದ್ದರು.

ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶ್ಯಾಮ್​ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಶ್ಯಾಮ್​ಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ದುರ್ಘಟನೆ ನಡೆದ ದಿನ ಪತ್ನಿ ತವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಅಡುಗೆ ಮಾಡುತ್ತಲೇ ಕುದಿಯುವ ಗಂಜಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದಾರುಣ ದೃಶ್ಯ ಸೆರೆ

Last Updated : Aug 2, 2022, 5:54 PM IST

ABOUT THE AUTHOR

...view details