ಜಮ್ಮು: ಸುಮಾರು 17 ತಿಂಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ರಿಯಾಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಾಚಾರ ಎಸಗಿ 17 ತಿಂಗಳು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ - ಶೋಫಿಯಾನ್ ಜಿಲ್ಲೆ
ಸಂತ್ರಸ್ತೆಯ ಹೇಳಿಕೆ ಜೊತೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಅಭಿಪ್ರಾಯ, ವೈದ್ಯಕೀಯ ವರದಿ ಪ್ರಕಾರ ಈತನ ಅರಪಾಧ ಕೃತ್ಯ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..
![ಅತ್ಯಾಚಾರ ಎಸಗಿ 17 ತಿಂಗಳು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ 17 ತಿಂಗಳ ಬಳಿಕ ಬಂಧನ](https://etvbharatimages.akamaized.net/etvbharat/prod-images/768-512-11866819-361-11866819-1621761295333.jpg)
ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ 17 ತಿಂಗಳ ಬಳಿಕ ಬಂಧನ
ರಾಸಿಯ ಮಹೋರ್‌ನ ಚಕ್ಲಾಸ್-ಜಮಾಸ್ಲಾನ್ ಗ್ರಾಮದ ನಿವಾಸಿ ಬಶೀರ್ ಅಹ್ಮದ್ ಎಂಬಾತ 2019ರಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಬಳಿಕ ಮಹಿಳೆಯ ದೂರಿನ ಅನ್ವಯ ಆತನ ಹುಡುಕಾಟಕ್ಕೆ ಮುಂದಾಗಿದ್ದರು. ಆದರೆ, ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ.
ಹೆಚ್ಚಾಗಿ ಉಗ್ರಗಾಮಿಳ ಅಡಗುತಾಣವಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಈತ ಭೂಗತನಾಗಿದ್ದ. ಅಲ್ಲದೆ ಪದೇಪದೆ ಈತ ಸ್ಥಳವನ್ನ ಬದಲಾಯಿಸುತ್ತಿದ್ದ. ಸಂತ್ರಸ್ತೆಯ ಹೇಳಿಕೆ ಜೊತೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಅಭಿಪ್ರಾಯ, ವೈದ್ಯಕೀಯ ವರದಿ ಪ್ರಕಾರ ಈತನ ಅರಪಾಧ ಕೃತ್ಯ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.