ಕರ್ನಾಟಕ

karnataka

By

Published : Dec 22, 2022, 8:43 PM IST

ETV Bharat / bharat

ನಿದ್ದೆಗೆಟ್ಟು ಯಶಸ್ಸಿನ ಬೆನ್ನೇರಿದ ಪಿಂಕ್ವಿಲ್ಲಾ ನಂದಿನಿ ಶೆಣೈ.. ಸಾಫ್ಟ್​ವೇರ್​ ಕೆಲಸ ಬಿಟ್ಟು ಉದ್ಯಮಿಯಾದ ಯಶೋಗಾಥೆ

ಈಗಿನ ಕಾಲದಲ್ಲಾದರು ಚಲನಚಿತ್ರಗಳು ಮತ್ತು ತಾರೆಯರ ಬಗ್ಗೆ ಎಲ್ಲಾ ಇತ್ತೀಚಿನ ಗಾಸಿಪ್‌ಗಳು ಗೂಗಲ್‌ನಲ್ಲಿ ಕಂಡುಬರುತ್ತವೆ. ಆದರೆ ಒಂದು ಕಾಲದಲ್ಲಿ ಇದರ ಕುರಿತು ಬೇರೆ ದೇಶದಲ್ಲಿರುವವರಿಗೆ ಆ ಮಾಹಿತಿ ಸಿಗುವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಎಲ್ಲರಿಗೂ ತಲುಪುವಂತೆ ವೆಬ್‌ಸೈಟ್ ಆರಂಭಿಸಬೇಕು ಎಂಬ ಯೋಚನೆ ಬಂತು, ಅದೇ ಯೋಚನೆ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಶೆಣೈ.

Nandini shenoy CEO of Pinkvilla Website
ಪಿಂಕ್ವಿಲ್ಲಾ ವೆಬ್​ಸೈಟ್​ನ ಸಿಇಒ ನಂದಿನಿ ಶೆಣೈ

ತನ್ನ ತಾಳ್ಮೆ, ಆಸಕ್ತಿ, ಸತತ ಪ್ರಯತ್ನದಿಂದ ಇಲ್ಲೊಬ್ಬ ಮಹಿಳೆ ವೆಬ್​ಸೈಟ್​ ಆರಂಭಿಸಿ ಯಶಸ್ವಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೌದು, ತಮ್ಮದೇ ವೆಬ್​ಸೈಟ್​ನ ಸಿಇಒ ಆಗಿರುವ ಯಶಸ್ವಿ ಉದ್ಯಮಿ ನಂದಿನಿ ಶೆಣೈ ತಮ್ಮ ಪಿಂಕ್ವಿಲ್ಲಾ ವೆಬ್​ಸೈಟ್​ನಿಂದ ಸಾಧನೆಯ ಬೆನ್ನೇರಿದ ಯಶೋಗಾಥೆ ತಿಳಿಯೋಣ ಬನ್ನಿ.

ನಂದಿನಿಯವರಿಗೆ ಎಲ್ಲರಿಗಿಂತಲೂ ಸಿನಿಮಾ ಮತ್ತು ತಾರೆಯರ ಬಗ್ಗೆ ಅತಿಯಾದ ಹುಚ್ಚು ಇತ್ತು. ತಮ್ಮ ಮನೆಯಲ್ಲಿ ಯಾವಾಗಲು ಚಲನಚಿತ್ರಗಳ ಕುರಿತು ಚರ್ಚೆ ನಡೆಯುತ್ತಿತ್ತಂತೆ. ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ಇಂಜಿನಿಯರಿಂಗ್​ಗಳು. ಹಾಗಾಗಿ ನಾನು ಕೂಡ ಇಂಜಿನಿಯರಿಂಗ್​ ಮುಗಿಸಿ ಎಂಎಸ್​ ಮಾಡಲು ಅಮೆರಿಕಕ್ಕೆ ತೆರಳಿ ಕೋರ್ಸ್​ ಮುಗಿಸಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಅಲ್ಲೇ ನೆಲೆಸಿದ್ದೆ ಎಂದು ತಮ್ಮ ಲೈಫ್​​ನ ಕುರಿತು ಈ ರೀತಿಯಾಗಿ ಹೇಳಿದ್ದಾರೆ.

ಈಗಿನ ಕಾಲದಲ್ಲಾದರು ಚಲನಚಿತ್ರಗಳು ಮತ್ತು ತಾರೆಯರ ಬಗ್ಗೆ ಎಲ್ಲಾ ಇತ್ತೀಚಿನ ಗಾಸಿಪ್‌ಗಳು ಗೂಗಲ್‌ನಲ್ಲಿ ಕಂಡುಬರುತ್ತವೆ. ಆದರೆ ಒಂದು ಕಾಲದಲ್ಲಿ ಇದರ ಕುರಿತು ಬೇರೆ ದೇಶದಲ್ಲಿರುವವರಿಗೆ ಆ ಮಾಹಿತಿ ಸಿಗುವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಎಲ್ಲರಿಗೂ ತಲುಪುವಂತೆ ವೆಬ್‌ಸೈಟ್ ಆರಂಭಿಸಬೇಕು ಎಂಬ ಯೋಚನೆ ಬಂತು, ಅದೇ ಯೋಚನೆ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಶೆಣೈ.

ಈ ಯೋಜನೆಯ ಪ್ರಾರಂಭದಲ್ಲಿ ನನ್ನ ಕುಟಂಬದವರೆಲ್ಲ ಆಕ್ಷೇಪಿಸಿದರು ಕೂಡ ನಾನು ನಿರಾಶೆಯಾಗದೆ ಕೆಲಸವನ್ನು ಶುರುಮಾಡಿಯೆ ಬಿಟ್ಟೆ. 2007ರಲ್ಲಿ 'ಪಿಂಕ್ವಿಲ್ಲಾ' ಎಂಬ ನನ್ನ ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಿ ಪ್ರಾರಂಭಿಸಿದೆ. ಇದರಲ್ಲಿ ಯಾರೂ ಕೂಡ ನಟ-ನಟಿಯರ ಮಾಹಿತಿಯನ್ನು ಹಂಚಿಕೊಳ್ಳಬಹುದು. ಪ್ರಾರಂಭಿಸಿದ 1 ವರ್ಷದೊಳಗೆ ನಾವು ದಿನಕ್ಕೆ 35 ಲೇಖನಗಳನ್ನು ಸ್ವೀಕರಿಸುವ ಮಟ್ಟವನ್ನು ತಲುಪಿ, ಅವುಗಳೆಲ್ಲವು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುವ ಹಂತಕ್ಕೆ ವೆಬ್​ಸೈಟ್​ ಬೆಳೆಯಿತು.

ಮುಖ್ಯವಾಗಿ, ತಮ್ಮ ವೆಬ್​ಸೈಟ್​ ನಲ್ಲಿ 2009 ರಂದು ನಾಯಕಿಯೊಬ್ಬರ ಹೊಸ ಅಪ್​ಡೇಟ್​ನ್ನು ಹಾಕಿದಾಗ ಪತ್ರಿಕೆಗಳು ಈ ವಿಷಯವನ್ನು ನಮ್ಮ ವೆಬ್​ಸೈಟ್​ನ ಹೆಸರಿನೊಂದಿಗೆ ಪ್ರಕಟಿಸಲು ಒಪ್ಪಿಕೊಂಡಿತ್ತು. ಅದಾದ ಬಳಿಕ ಪಿಂಕ್ವಿಲ್ಲಾಗೆದ ವೀಕ್ಷಕರು ಇನ್ನು ಹೆಚ್ಚಾದರು. ಅಲ್ಲಿಂದ ನಾನು ಹಿಂತಿರುಗಿ ನೋಡುವ ಅಗತ್ಯವಿರಲಿಲ್ಲ. ಯಶಸ್ಸಿನ ದಾರಿಯಲ್ಲಿ ನನ್ನ ವೆಬ್​ಸೈಟ್​ ಪಯಣಿಸುತ್ತಿತ್ತು ಎಂದಿದ್ದಾರೆ.

ನಾನು ಈ ಹಂತ ತಲುಪಲು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಹಗಲು ರಾತ್ರಿಯೆನ್ನದೆ, ಕಷ್ಟಪಟ್ಟು ವೆಬ್‌ಸೈಟ್ ಕೆಲಸ ಮಾಡುತ್ತಿದ್ದೆ. ದಿನಕ್ಕೆ ಲಕ್ಷಾಂತರ ವೀಕ್ಷಣೆಗಳು ಬರಲು ಹಂಬಲಿಸುತ್ತಿದ್ದೆ. ಇಷ್ಟೇ ಅಲ್ಲದೆ, ನನ್ನ ವೆಬ್​ಸೈಟ್​ನ್ನು ಇನ್ನೂ ಅಭಿವೃದ್ಧಿ ಪಡಿಸಲು ತಂಡವನ್ನು ರಚಿಸಿದ್ದೆ. ನಂತರ ನೇರವಾಗಿ ತಾರೆಯರನ್ನ ಸಂದರ್ಶನ ನಡೆಸುವುದನ್ನು ಶುರುಮಾಡಿದೆವು. ಹೀಗೆ ಮುಂದೆ ನಾನು ನನ್ನ ಸಾಫ್ಟ್ ವೇರ್ ಕೆಲಸ ಬಿಟ್ಟೆ. ವಿಷೇಶವೆಂದರೆ ನಾನು ಈ ಉದ್ಯೋಗ ಪ್ರಾರಂಭಿಸುವ ಸಮಯದಲ್ಲಿ ಎಲ್ಲರಿಂದ ಆಕ್ಷೇಪವಿತ್ತು. ಆದರೆ ಈ ಬಾರಿ ಯಾರು ನನ್ನ ನಿರ್ಧಾರಕ್ಕೆ ಅಡ್ಡಿ ಬರಲಿಲ್ಲ. ಕಾರಣ ಅವರಿಗೆ ನನ್ನ ಮೇಲೆ ಮೂಡಿದ್ದ ವಿಶ್ವಾಸ. ಆದ್ದರಿಂದ ಯಾವುದೇ ಪ್ರಯತ್ನ ಮಾಡುವ ಮುನ್ನ ಅದಕ್ಕೆ ನೂರೆಂಟು ವಿಘ್ನಗಳು ಸಹಜ. ಆದರೆ ಅದೆಲ್ಲವನ್ನು ಮೀರಿ ನಿಂತು ಬೆಳೆಯಬೇಕು ಎಂದು ತಮ್ಮ ಜೀವನದ ಕುರಿತು ಈ ರೀತಿಯಾಗಿ ನಂದಿನಿ ಶೆಣೈ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಮೇಲೆ ಸಾಲ.. ಒಳ್ಳೆಯದ್ದಾ.. ಕೆಟ್ಟದ್ದಾ?; ಇಲ್ಲಿವೆ ಕೆಲ ಟಿಪ್ಸ್​!

For All Latest Updates

ABOUT THE AUTHOR

...view details