ಕರ್ನಾಟಕ

karnataka

ETV Bharat / bharat

4 ತಿಂಗಳೊಳಗೆ 1,300 ಬ್ಯಾಂಕ್​ ಸಿಬ್ಬಂದಿ ಕೋವಿಡ್​ಗೆ ಬಲಿ - ಬ್ಯಾಂಕ್ ನೌಕರರು

ಕೋವಿಡ್​ ಸಾಂಕ್ರಾಮಿಕದ ವೇಳೆ ಎಲ್ಲಾ ಅಪಾಯಗಳೊಂದಿಗೆ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ನೌಕರರೇ ಮಹಾಮಾರಿಗೆ ಬಲಿಯಾಗಿದ್ದಾರೆ. ಫೆಬ್ರವರಿಯಿಂದ ಮೇ ತಿಂಗಳೊಳಗಾಗಿ 1,300 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ

AIBEA
4 ತಿಂಗಳೊಳಗೆ 1,300 ಬ್ಯಾಂಕ್​ ಸಿಬ್ಬಂದಿ ಕೋವಿಡ್​ಗೆ ಬಲಿ

By

Published : May 21, 2021, 12:18 PM IST

ಚೆನ್ನೈ:ಕೋವಿಡ್​ ಎರಡನೇ ಅಲೆಯ ಈ ವೇಳೆಯಲ್ಲಿ ಸುಮಾರು 1,300 ಬ್ಯಾಂಕ್​ ಸಿಬ್ಬಂದಿ ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಿಳಿಸಿದೆ.

2020 ರಿಂದ 2021ರ ಫೆಬ್ರವರಿಯ ವರೆಗೆ ಕೊರೊನಾ ಸೋಂಕಿಗೆ ತುತ್ತಾಗಿ 600 ಬ್ಯಾಂಕ್​ ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಫೆಬ್ರವರಿಯಿಂದ ಮೇ ತಿಂಗಳೊಳಗಾಗಿ 1,300 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎಐಬಿಇಎ ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಮೆಹ್ತಾ ಅವರಿಗೆ ಬರೆದ ಪತ್ರದಲ್ಲಿ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ವೆಂಕಟಾಚಲಂ ಮಾಹಿತಿ ನೀಡಿದ್ದಾರೆ.

"ಬ್ಯಾಂಕ್ ಉದ್ಯೋಗಿಗಳಿಗೆ ವ್ಯಾಕ್ಸಿನೇಷನ್​​​ಗೆ ಆದ್ಯತೆ ನೀಡಬೇಕೆಂಬ ನಮ್ಮ ಕೂಗನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸಾಂಕ್ರಾಮಿಕದ ವೇಳೆ ಎಲ್ಲಾ ಅಪಾಯಗಳೊಂದಿಗೆ ಬ್ಯಾಂಕ್ ನೌಕರರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ, ಜನರ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಅವರು ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ" ಎಂದು ವೆಂಕಟಾಚಲಂ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿಗೆ ಭಾರತದಲ್ಲಿ ಸಾವಿರ ವೈದ್ಯರು ಬಲಿ

ರಾಜ್ಯ ಸರ್ಕಾರಗಳು ನಿರ್ಬಂಧಿಸಿರುವ ಕರ್ಫ್ಯೂ, ಲಾಕ್​​ಡೌನ್, ಸಾರ್ವಜನಿಕ ಸಾರಿಗೆ ಸ್ಥಗಿತದಿಂದಾಗಿ ಬ್ಯಾಂಕ್ ನೌಕರರು ತಮ್ಮ ಶಾಖೆಗಳು ಹಾಗೂ ಕಚೇರಿಗಳಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಈ ವೇಳೆ ಸ್ಥಳೀಯ ಪೊಲೀಸರಿಂದ ಅವಮಾನ-ನಿಂದನೆಗಳಿಗೆ ಒಳಗಾಗುತ್ತಿದ್ದಾರೆ. ರಾಜ್ಯ ಸರ್ಕಾರಗಳು, ರಾಜ್ಯ ಮಟ್ಟದ ಬ್ಯಾಂಕ್​​ ಸಮಿತಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಬ್ಯಾಂಕ್​​ ಒಕ್ಕೂಟಗಳ ಅಭಿಪ್ರಾಯಗಳನ್ನು ಪಡೆಯುವುದು ಒಳಿತು ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಬಳಲುತ್ತಿರುವ ಬ್ಯಾಂಕ್ ನೌಕರರ ಸಂಖ್ಯೆ ಮತ್ತು ಬಲಿಯಾದವರ ಸಂಖ್ಯೆಯ ಬಗ್ಗೆ ವಾರಕ್ಕೊಮ್ಮೆ ಬುಲೆಟಿನ್ ಬಿಡುಗಡೆ ಮಾಡುವಂತೆ ವೆಂಕಟಾಚಲಂ ಎಐಬಿಎಗೆ ಒತ್ತಾಯಿಸಿದ್ದಾರೆ.

ABOUT THE AUTHOR

...view details