ನವದೆಹಲಿ : ವಿಧವೆಯೊಬ್ಬರು ತಮ್ಮ 27 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂಬ ಬೇಡಿಕೆ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇಂದು ತೀರ್ಪನ್ನು ಪ್ರಕಟಿಸಲಿದೆ. ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ನೇತೃತ್ವದ ಪೀಠ ಇಂದು ತೀರ್ಪು ನೀಡಲಿದ್ದು, ಅರ್ಜಿದಾರ ಮಹಿಳೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆಯ ಪರ ವಾದ ಮಂಡಿಸಿದ ವಕೀಲ ಡಾ.ಅಮಿತ್ ಮಿಶ್ರಾ, ಅರ್ಜಿದಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಆಕೆಗೆ ಗರ್ಭಾವಸ್ಥೆಯನ್ನು ಮುಂದುವರೆಸುವಂತೆ ಹೇಳಿದರು. ಆದರೆ, ಗರ್ಭಾವಸ್ಥೆಯನ್ನು ಮುಂದುವರಿಸುವುದು ಮಹಿಳೆಯ ಖಾಸಗಿತನದ ಹಕ್ಕನ್ನು ಉಲ್ಲಂಘನೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿದೆ. ಇದು ಅರ್ಜಿದಾರರ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ತಂದಿದೆ ಎಂದಿದ್ದರು.
ಮಹಿಳೆ ಏಮ್ಸ್‌ಗೆ ದಾಖಲು :ಇದಕ್ಕೂ ಮೊದಲು ಡಿಸೆಂಬರ್ 30, 2023 ರಂದು, ಹೈಕೋರ್ಟ್‌ನ ರಜಾಕಾಲದ ಪೀಠವು ಮಹಿಳೆಯನ್ನು ಪರೀಕ್ಷಿಸಲು ಏಮ್ಸ್‌ನ ಮಾನಸಿಕ ಆರೋಗ್ಯ ವಿಭಾಗಕ್ಕೆ ಆದೇಶಿಸಿತ್ತು. ಮಹಿಳೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಲಕ್ಷಣಗಳಿವೆ ಎಂದು ಏಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯು ಗರ್ಭಾವಸ್ಥೆಯನ್ನು ಮುಂದುವರೆಸಿದರೆ ಅದು ಅವಳಿಗೆ ಅಪಾಯಕಾರಿ. ಮಹಿಳೆಯ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಿದ ನಂತರ ಏಮ್ಸ್ ಆಸ್ಪತ್ರೆಗೆ ದಾಖಲಿಸಲು ಆಕೆಯ ಸಂಬಂಧಿಕರಿಗೆ ಆದೇಶಿಸಿದೆ. ಮಹಿಳೆಯನ್ನು ಏಮ್ಸ್‌ನ ಮನೋವೈದ್ಯಕೀಯ ವಿಭಾಗಕ್ಕೆ ದಾಖಲಿಸಲಾಗಿದೆ.