ನವದೆಹಲಿ: ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್ವೇರ್ ಮೂಲಕ ಪ್ರತಿಪಕ್ಷದ ನಾಯಕರು, ಸಚಿವರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಮತ್ತು ಪತ್ರಕರ್ತರ ಫೋನ್ ಟ್ಯಾಪಿಂಗ್ ಮಾಡಿರುವುದನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಿತು. ನವದೆಹಲಿಯ ಶಾಸ್ತ್ರಿ ಭವನದ ಎದುರು ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಶ್ರೀನಿವಾಸ್ ಬಿ.ವಿ, ಬ್ರಿಟಿಷರ ಕಾಲದಲ್ಲಿ ವ್ಯವಹಾರಗಳ ಮೇಲೆ ಗೂಢಚರ್ಯೆ ನಡೆಸಲಾಗುತ್ತಿತ್ತು. ಅವರು ಹೋದರೂ ಆ ಪ್ರವೃತ್ತಿ ಈಗಲೂ ಮುಂದುವರೆದಿದೆ. ನಾವು ಯಾವಾಗ ಬದಲಾಗುವುದು? ಏಳು ವರ್ಷ ಕಳೆಯಿತು, ಆ, ವ್ಯಕ್ತಿ ( ಪ್ರಧಾನಿ ಮೋದಿ) ಮನ್ ಕಿಬಾತ್ ( ಮನದ ಮಾತು) ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.