ಕರ್ನಾಟಕ

karnataka

ETV Bharat / bharat

ಊಹಾಪೋಹಗಳಿಗೆ ತೆರೆ ಎಳೆದ ಬ್ಯಾನರ್ಜಿ: ಸೋದರಳಿಯನಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟ - ಬ್ಯಾನರ್ಜಿ ಸೋದರಳಿಯನಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ

ಹೊಸ ನಾಯಕತ್ವ ಪಕ್ಷವನ್ನು ಮುನ್ನಡೆಸಲು ಮುಂದಾಗಬೇಕು. ಆದರೆ, ಹಳೆಯದು ಚಿನ್ನ ಎಂದು ಯಾವಾಗಲೂ ನೆನಪಿನಲ್ಲಿಡಿ, ಎಂದು ಮುಖ್ಯಮಂತ್ರಿ ಸಭೆಯಲ್ಲಿ ಹೇಳಿದರು ಎಂದು ಹೆಸರು ಹೇಳಲು ಇಚ್ಛಿಸದ ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಈ ವೇಳೆ ಮಾಹಿತಿ ನೀಡಿದ್ದಾರೆ.

ಸೋದರಳಿಯನಿಗೆ  ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟ
ಸೋದರಳಿಯನಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟ

By

Published : Feb 18, 2022, 8:37 PM IST

ಕೋಲ್ಕತ್ತಾ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ತೃಣಮೂಲ ಕಾಂಗ್ರೆಸ್‌ನ ವರಿಷ್ಠೆ ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯ ಹಾಗೂ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮರು ನಾಮಕರಣ ಮಾಡಿದ್ದಾರೆ.

ಸೋಮವಾರ ಇಲ್ಲಿಯ ತಮ್ಮ ನಿವಾಸದಲ್ಲಿ ಹೊಸದಾಗಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ಈ ಸಭೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಮರುನಾಮಕರಣ ಮಾಡಲಾಗಿದೆ.

ಹೊಸ ನಾಯಕತ್ವ ಪಕ್ಷವನ್ನು ಮುನ್ನಡೆಸಲು ಮುಂದಾಗಬೇಕು. ಆದರೆ, ಹಳೆಯದು ಚಿನ್ನ ಎಂದು ಯಾವಾಗಲೂ ನೆನಪಿನಲ್ಲಿಡಿ, ಎಂದು ಮುಖ್ಯಮಂತ್ರಿ ಸಭೆಯಲ್ಲಿ ಹೇಳಿದರು ಎಂದು ಹೆಸರು ಹೇಳಲು ಇಚ್ಛಿಸದ ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮಹಿಳೆಯರಿಗೆ ತಿಂಗಳಿಗೆ ₹1,100 ಜತೆಗೆ 8 ಸಿಲಿಂಡರ್‌ ಉಚಿತ : ಪಂಜಾಬ್​ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​

ಪದಾಧಿಕಾರಿಗಳ ಹುದ್ದೆಗಳಿಗೆ ಹೆಸರುಗಳ ಆಯ್ಕೆಯಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಹಳೆಯ ಕಾರ್ಯಕರ್ತರಿಗೆ ಆದ್ಯತೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸುಬ್ರತಾ ಬಕ್ಷಿ ಮತ್ತು ಯಶವಂತ್ ಸಿನ್ಹಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಾಮ ನಿರ್ದೇಶನಗೊಂಡರೆ, ಅರೂಪ್ ಬಿಸ್ವಾಸ್ ಖಜಾಂಚಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಪರವಾಗಿ ಫಿರ್ಹಾದ್ ಹಕೀಮ್ ಅವರಿಗೆ ಸಮನ್ವಯ ಜವಾಬ್ದಾರಿಯನ್ನು ನೀಡಲಾಗಿದೆ.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿದೇಶಾಂಗ ವ್ಯವಹಾರಗಳು ಮತ್ತು ಆರ್ಥಿಕ ನೀತಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಅಮಿತ್ ಮಿತ್ರಾ ಮತ್ತು ಯಶವಂತ್ ಸಿನ್ಹಾ ಅವರಿಗೆ ನೀಡಲಾಗಿದ್ದು, ರಾಜ್ಯಸಭೆಗೆ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸುಖೇಂದು ಶೇಖರ್ ರಾಯ್ ಮತ್ತು ಲೋಕಸಭೆಗೆ ರಾಷ್ಟ್ರೀಯ ವಕ್ತಾರರಾಗಿ ಡಾ.ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ನೇಮಿಸಲಾಗಿದೆ.

ABOUT THE AUTHOR

...view details