ಕರ್ನಾಟಕ

karnataka

ETV Bharat / bharat

ಕೃಷಿ ಕಾಯ್ದೆಗಳನ್ನ ವಿರೋಧಿಸಿ ರಾಜೀನಾಮೆಗೆ ಮುಂದಾದ ಲೋಕದಳ ಶಾಸಕ - ಕೇಂದ್ರದ ನೂತನ ಕೃಷಿ ಕಾಯ್ದೆ

ಕಳೆದ 47 ದಿನಗಳಿಂದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲ ವಿರೋಧ ಪಕ್ಷಗಳು ರೈತರಿಗೆ ಸಂಪೂರ್ಣ ಬೆಂಬಲ ನೀಡುತ್ತಿವೆ. ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಅಸಂವಿಧಾನಿಕ ರೀತಿ ಅಂಗೀಕರಿಸಿದೆ..

Abhay Chautala
ಅಭಯ್ ಸಿಂಗ್​ ಚೌತಲಾ

By

Published : Jan 11, 2021, 2:45 PM IST

ಚಂಡೀಗಢ(ಹರಿಯಾಣ) :ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಪಕ್ಷದ ಶಾಸಕ ಅಭಯ್ ಸಿಂಗ್​ ಚೌತಾಲಾ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಪತ್ರ ಬರೆದಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಕೊನೆಗೂ ಹಿಂತೆಗೆದುಕೊಂಡಿಲ್ಲ. ರೈತರ ಪ್ರತಿಭಟನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪರಿಗಣಿಸಿ ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ರಾಜೀನಾಮೆ ಪತ್ರ

ಇದನ್ನೂ ಓದಿ: ಕೃಷಿ ಕಾನೂನುಗಳನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಬಹುದೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಕಳೆದ 47 ದಿನಗಳಿಂದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲ ವಿರೋಧ ಪಕ್ಷಗಳು ರೈತರಿಗೆ ಸಂಪೂರ್ಣ ಬೆಂಬಲ ನೀಡುತ್ತಿವೆ. ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಅಸಂವಿಧಾನಿಕ ರೀತಿ ಅಂಗೀಕರಿಸಿದೆ. ಕಾಯ್ದೆಗಳ ವಿರುದ್ಧ ಐಎನ್‌ಎಲ್‌ಡಿ ಕೂಡ ಧ್ವನಿ ಎತ್ತಿದೆ.

ABOUT THE AUTHOR

...view details