ಕರ್ನಾಟಕ

karnataka

ಕೃಷಿ ಕಾಯ್ದೆಗಳನ್ನ ವಿರೋಧಿಸಿ ಹರಿಯಾಣದ ಐಎನ್‌ಎಲ್‌ಡಿ ಶಾಸಕ ಚೌಟಾಲಾ ರಾಜೀನಾಮೆ

By

Published : Jan 27, 2021, 9:11 PM IST

ಜನವರಿ ತಿಂಗಳ ಆರಂಭದಲ್ಲಿ ಕೃಷಿ ಕಾಯ್ದೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದು ಚೌಟಾಲಾ ಟೀಕಿಸಿದ್ದರು. ಇದರ ಜೊತೆಗೆ ಇನ್ನೂ ಸುಮ್ಮನಿದ್ದರೆ ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದರು..

Abhay Chautala
ಶಾಸಕ ಅಭಯ್ ಸಿಂಗ್ ಚೌಟಾಲಾ

ಚಂಡೀಗಢ :ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಅಭಯ್ ಸಿಂಗ್ ಚೌಟಾಲಾ ಕೊನೆಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಗಣರಾಜ್ಯೋತ್ಸವ ವೇಳೆಗೆ ಕೇಂದ್ರ ಸರ್ಕಾರ ತನ್ನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್​ಎಲ್​ಡಿ) ಪಕ್ಷದ ಏಕೈಕ ಶಾಸಕ ಅಭಯ್ ಸಿಂಗ್ ಚೌಟಾಲಾ, ಒಂದು ವೇಳೆ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು.

ಇದನ್ನೂ ಓದಿ:ಇಂದ್ರಜಿತ್​​ ಲಂಕೇಶ್​​ಗೆ ಸಿಸಿಬಿ ನೋಟಿಸ್

ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಚೌಟಾಲಾ ಅವರು ಟ್ರ್ಯಾಕ್ಟರ್​​ನಲ್ಲಿ ಚಂಡೀಗಢದ ವಿಧಾನಸಭೆಗೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಐಎನ್​ಎಲ್​ಡಿ ಪಕ್ಷದ ಏಕೈಕ ಶಾಸಕರೂ ವಿಧಾನಸಭೆಯಿಂದ ತೆರವಾಗಿದ್ದಾರೆ.

57 ವರ್ಷದ ಅಭಯ್ ಸಿಂಗ್ ಚೌಟಾಲಾ ಎಲ್ಲೆನಾಬಾದ್ ಸ್ಥಾನದಿಂದ ಮೂರು ಬಾರಿ ಶಾಸಕರಾಗಿದ್ದು, ಅವರ ಇಂಡಿಯನ್ ನ್ಯಾಷನಲ್ ಲೋಕದಳ ಪಕ್ಷ ರೈತರನ್ನೇ ಆಧಾರವಾಗಿರಿಸಿಕೊಂಡಿದೆ. ಕೃಷಿ ಕಾನೂನುಗಳನ್ನು ವಿರೋಧಿಸುವ ಒತ್ತಡ ಹೆಚ್ಚಾದ ಹಿನ್ನೆಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜನವರಿ ತಿಂಗಳ ಆರಂಭದಲ್ಲಿ ಕೃಷಿ ಕಾಯ್ದೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದು ಚೌಟಾಲಾ ಟೀಕಿಸಿದ್ದರು. ಇದರ ಜೊತೆಗೆ ಇನ್ನೂ ಸುಮ್ಮನಿದ್ದರೆ ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ABOUT THE AUTHOR

...view details