ಎರ್ನಾಕುಲಂ, ಕೇರಳ:ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಎನ್ನಲಾಗಿರುವ ಅಬ್ದುಲ್ ನಾಸಿರ್ ಮದನಿ ನಿನ್ನೆ ಸಂಜೆ ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದರು. ಕೊಚ್ಚಿಗೆ ಆಗಮಿಸಿದ ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮಾಜಿ ಅಧ್ಯಕ್ಷ ಅಬ್ದುಲ್ ನಾಜರ್ ಮದಾನಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಎರ್ನಾಕುಲಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ(ಜೂನ್ 26) ಕೊಚ್ಚಿಯಿಂದ ಕೊಲ್ಲಂಗೆ ಪ್ರಯಾಣಿಸುತ್ತಿದ್ದಾಗ ಅಧಿಕ ರಕ್ತದೊತ್ತಡದ ಕಾರಣ ಮದನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಅವರು ಕೊಲ್ಲಂಗೆ ಮರಳಲಿದ್ದಾರೆ.
ಮದನಿ ನಿನ್ನೆ ಬೆಂಗಳೂರಿನಿಂದ ಕೇರಳಕ್ಕೆ ಆಗಮಿಸಿದ್ದರು. ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಅವರನ್ನು ಪಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬರಮಾಡಿಕೊಂಡರು. ಬೆಂಗಳೂರಿನಿಂದ ವಿಮಾನದ ಮೂಲಕ ಕೊಚ್ಚಿ ತಲುಪಿದ ಮದನಿ ಅವರು ಆಂಬ್ಯುಲೆನ್ಸ್‌ನ ಮೂಲಕ ಕೊಲ್ಲಂಗೆ ಮರಳಲು ಯೋಜಿಸಿದ್ದರು. ಅವರು ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಪ್ರಯಾಣದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮದನಿಗೆ ತನ್ನ ತಂದೆಯನ್ನು ಭೇಟಿ ಮಾಡುವ ಆಸೆ ಇದೆ. ತಂದೆಯೊಂದಿಗೆ ಕಾಲ ಕಳೆದು ಅನ್ವರ್ಸೇರಿಗೆ ತೆರಳಲಿದ್ದಾರೆ. ಐದೂವರೆ ವರ್ಷಗಳ ನಂತರ ಚಿಕಿತ್ಸೆ ಪಡೆಯುತ್ತಿದ್ದ ತಂದೆಯನ್ನು ನೋಡಲು ಕೇರಳಕ್ಕೆ ಬಂದಿದ್ದಾರೆ. ಇದಕ್ಕೂ ಮೊದಲು ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಬಂದಿದ್ದರು. ಚಿಕಿತ್ಸೆ ಪಡೆಯುತ್ತಿರುವ ತನ್ನ ತಂದೆಯನ್ನು ನೋಡಲು ಕೇರಳಕ್ಕೆ ಭೇಟಿ ನೀಡಲು ಮದನಿಗೆ ಈ ಹಿಂದೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.
ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆದು ಮದನಿ 12 ಕಾಲ ಕೇರಳದಲ್ಲಿ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಲು ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಮದನಿ ಅರ್ಜಿ ಸಲ್ಲಿಸಿದ್ದ. ಈ ಸಂಬಂಧ ಮದನಿ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯವು ಕೇರಳಕ್ಕೆ ತೆರಳಲು ಅನುಮತಿ ನೀಡಿತ್ತು. ಹೀಗಾಗಿ ಒಬ್ಬ ಆರ್ಎಸ್ಐ, ಮೂವರು ಕಾನ್ಸ್ಟೇಬಲ್ಗಳು ಹಾಗೂ ಒಬ್ಬ ಚಾಲಕನನ್ನು ನಿಯೋಜಿಸಲಾಗಿದೆ. 12 ದಿನಗಳ ಸಿಬ್ಬಂದಿ ಖರ್ಚು-ವೆಚ್ಚ ಹಾಗೂ ಸೇವಾ ಶುಲ್ಕ 6,76,101 ರೂಪಾಯಿಯನ್ನು ಕರ್ನಾಟಕಕ್ಕೆ ಸರ್ಕಾರಕ್ಕೆ ಮುಂಗಡವಾಗಿ ಪಾವತಿಸಿದ್ದಾನೆ ಎಂದು ಹೇಳಲಾಗಿದೆ.