ಕರ್ನಾಟಕ

karnataka

By

Published : Feb 23, 2021, 9:20 PM IST

ETV Bharat / bharat

22ನೇ ವಯಸ್ಸಿಗೆ ಗುಜರಾತ್​ ಕಾರ್ಪೋರೇಷನ್​ ಚುನಾವಣೆಯಲ್ಲಿ ಜಯಭೇರಿ... ಯಾರು ಈ ಪಾಯಲ್​!?

ಗುಜರಾತ್​ನ ಸ್ಥಳೀಯ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ 22 ವರ್ಷದ ಯುವತಿ ಗೆಲುವು ದಾಖಲು ಮಾಡಿದ್ದಾರೆ.

AAP's Payal Patel
AAP's Payal Patel

ಸೂರತ್​:ಗುಜರಾತ್​ನ ಆರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ದಾಖಲು ಮಾಡಿದ್ದು, ಇದರ ಮಧ್ಯೆ ಕೂಡ ಆಮ್​ ಆದ್ಮಿ ಪಕ್ಷ ಗುಜರಾತ್​ನ ಕೆಲವೊಂದು ಸ್ಥಳಗಳಲ್ಲಿ ಜಯಭೇರಿ ಬಾರಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಾಯಲ್ ಗೆಲುವು

ಸೂರತ್ ಮುನ್ಸಿಪಾಲ್​ ಕಾರ್ಪೋರೇಷನ್​ನಿಂದ ಚುನಾವಣೆ ಎದುರಿಸಿದ್ದ 22 ವರ್ಷದ ಪಾಯಲ್​ ಪಟೇಲ್​ ಇದೀಗ ಗೆಲುವು ದಾಖಲು ಮಾಡಿದ್ದಾರೆ. ವಾರ್ಡ್​ ನಂಬರ್​ 16ರಿಂದ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಗೆಲುವಿನ ಸಂಭ್ರಮದಲ್ಲಿ ಪಾಯಲ್​

ಯಾರು ಈ ಪಾಯಲ್​ ಪಟೇಲ್​?

22 ವರ್ಷದ ಪಾಯಲ್​ ನಟಿಯಾಗಿ ಗುರುತಿಸಿಕೊಂಡಿದ್ದರು. ಆದರೆ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಉದ್ದೇಶದಿಂದ ಅದೃಷ್ಟ ಪರೀಕ್ಷೆಗೆ ಇಳಿದು ಅದರಲ್ಲಿ ಜಯ ಸಾಧಿಸಿದ್ದಾರೆ. ಸೂರತ್​ನ 120 ಸ್ಥಾನಗಳಲ್ಲಿ ಆಮ್​ ಆದ್ಮಿ ಪಕ್ಷ 27 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದು, ಫೆ. 26ರಂದು ಕೇಜ್ರಿವಾಲ್​ ಇಲ್ಲಿಗೆ ಭೇಟಿ ನೀಡಿ ರೋಡ್ ಶೋ ನಡೆಸಲಿದ್ದಾರೆ.

ಗುಜರಾತ್​ ಕಾರ್ಪೋರೇಷನ್​ ಚುನಾವಣೆಯಲ್ಲಿ ಜಯಭೇರಿ

ABOUT THE AUTHOR

...view details