ಕರ್ನಾಟಕ

karnataka

ETV Bharat / bharat

ದೆಹಲಿ ನಂತರ ಪಂಜಾಬ್​ನಲ್ಲೂ 'ಆಪ್'ಗೆ ಪ್ರಚಂಡ ಗೆಲುವು​: ಸಿಖ್ಖರ 'ಮನ್'​ ಗೆದ್ದಿದ್ದೇಗೆ? - ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್

ರಾಷ್ಟ್ರ ರಾಜಧಾನಿ ದೆಹಲಿ ಬಳಿಕ ಪಂಜಾಬ್​ನಲ್ಲಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ(ಎಎಪಿ) ಗೆದ್ದು ಬೀಗಿದೆ. ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು ಸಹ ಆಪ್​ಗೆ ಪ್ಲಸ್​​ ಪಾಯಿಂಟ್​ ಎಂದೇ ವಿಶ್ಲೇಷಿಸಲಾಗಿದೆ. ಆಪ್​ನ​ ಎರಡನೇ ಪ್ರಭಾವಿ ನಾಯಕ ಎಂದೇ ಹೆಸರಾದ ಭಗವಂತ್ ಮನ್ ಸಿಖ್ಖರ ಮನ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ.

punjab elections
punjab elections

By

Published : Mar 10, 2022, 6:25 PM IST

Updated : Mar 10, 2022, 6:57 PM IST

ರಾಷ್ಟ್ರ ರಾಜಕಾರಣದಲ್ಲಿ ಆಮ್​ ಆದ್ಮಿ ಪಕ್ಷವು ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಕೇವಲ ಹತ್ತು ವರ್ಷಗಳಲ್ಲೇ ಉತ್ತರ ಭಾರತದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದೆ.

ಸಾಮಾಜಿಕ ಹೋರಾಟದ ಹಿನ್ನೆಲೆಯ ಅರವಿಂದ್​ ಕೇಜ್ರಿವಾಲ್​ ನೇತೃತ್ವದ 'ಆಪ್​' ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸತತ ಎರಡನೇ ಬಾರಿಗೆ ಆಡಳಿತ ನಡೆಸುತ್ತಿದೆ. ಈಗ ಮತ್ತೊಂದು ಪ್ರಮುಖ ರಾಜ್ಯ ಪಂಜಾಬ್​ನಲ್ಲಿಯೂ ಅಮೋಘ ಗೆಲುವು ಸಾಧಿಸಿ ರಾಷ್ಟ್ರೀಯ ಪಕ್ಷಗಳು ನಿದ್ದೆಗೆಡುವಂತೆ ಮಾಡಿದೆ.

2017ರ ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ 20 ಸ್ಥಾನಗಳಲ್ಲಿ ಆಪ್​ ಗೆಲುವು ಸಾಧಿಸಿತ್ತು. ಈ ಮೂಲಕ ಈ ಹಿಂದೆ ಆಡಳಿತ ನಡೆಸಿದ್ದ ಶಿರೋಮಣಿ ಅಕಾಲಿ ದಳ (15 ಸ್ಥಾನ) ಮತ್ತು ಬಿಜೆಪಿ (03 ಸ್ಥಾನ)ಯನ್ನು ಹಿಂದಿಕ್ಕಿ ತನ್ನ ವರ್ಚಸ್ಸು ಸ್ಥಾಪಿಸಿತ್ತು. ಈಗ ಐದು ವರ್ಷಗಳಲ್ಲೇ ಆಡಳಿತಾರೂಢ ಕಾಂಗ್ರೆಸ್​ ಪಕ್ಷವನ್ನೇ ಆಪ್​ ದೂಳೀಪಟ ಮಾಡಿಬಿಟ್ಟಿದೆ. 117 ಸಂಖ್ಯಾಬಲದ ವಿಧಾನಸಭೆಯಲ್ಲಿ ಆಪ್​ 20ರಿಂದ 92ಕ್ಕೆ ತನ್ನ ಅಧಿಪತ್ಯವನ್ನು ವಿಸ್ತರಿಸಿಕೊಂಡು ಪ್ರಪಂಚ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಕಳೆದ ಬಾರಿ 77 ಸ್ಥಾನಗಳ ಗೆದ್ದು ಅಧಿಕಾರದಲ್ಲಿದ್ದ ಕಾಂಗ್ರೆಸ್​ ಕೇವಲ 18 ಸ್ಥಾನಕ್ಕೆ ಕುಸಿದು ಮುಗ್ಗರಿಸಿದೆ. ಇತ್ತ, ಶಿರೋಮಣಿ ಅಕಾಲಿ ದಳ 15ರಿಂದ 3ಕ್ಕೆ ಹಾಗೂ ಕೇಂದ್ರದ ಆಡಳಿತಾರೂಢ ಬಿಜೆಪಿ 3ರಿಂದ 2 ಸ್ಥಾನಕ್ಕೆ ಕುಸಿದಿದೆ.

ಆಪ್​ ಗೆಲುವಿಗೆ ಕಾರಣವೇನು?: ‘ಪಂಜಾಬ್​ನಲ್ಲಿ ಆಪ್​ ಗೆಲುವಿಗೆ ಹಲವು ಪ್ರಮುಖಗಳನ್ನು ಇದೀಗ ಹುಡುಕಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಪಕ್ಕದ ದೆಹಲಿಯಲ್ಲಿ ಆಪ್​ ಆಡಳಿತದಲ್ಲಿ ಇರುವುದೇ ಪಂಜಾಬ್​ನಲ್ಲಿ ಗೆಲುವಿಗೆ ಕಾರಣವಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಅಲ್ಲದೇ, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್​ ಮತ್ತು ಶಿರೋಮಣಿ ಅಕಾಲಿ ದಳವೇ ಅತ್ಯಧಿಕ ಕಾಲ ಆಡಳಿತ ನಡೆದಿದ್ದು, ಈ ಎರಡೂ ಪಕ್ಷಗಳು ಒಂದೇ ಆಗಿದೆ. ಆದ್ದರಿಂದ ಆಡಳಿತದಲ್ಲಿ ಬದಲಾವಣೆಯನ್ನು ತರಬೇಕೆಂಬ ಧ್ವನಿಯನ್ನು ಆಪ್​ ಎತ್ತಿತ್ತು.

ಪಂಜಾಬ್​ನಲ್ಲಿ ಬದಲಾವಣೆ ತರಲು ದೆಹಲಿ ಸರ್ಕಾರವನ್ನು ಉದಾಹರಣೆಯಾಗಿ ಆಪ್​ ಕೊಡುತ್ತಿತ್ತು. ಆಪ್​ನ ಅಧಿನಾಯಕ ಕೇಜ್ರಿವಾಲ್ ನೇತೃತ್ವದ ಸರ್ಕಾರವು ದೆಹಲಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಒತ್ತು ಹಾಗೂ ಜನತೆಗೆ ಆಕರ್ಷಕ ಕೊಡುಗೆಗಳನ್ನು (ವಿದ್ಯುತ್, ನೀರಿನ ದರ ಕಡಿಮೆ) ಕೊಡುವುದೊಂದಿಗೆ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿದೆ. ಮೇಲಾಗಿ ಈ ಹಿಂದೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಯಾವ ರೀತಿಯಾಗಿ 'ಗುಜರಾತ್​ ಮಾದರಿ'ಯನ್ನು ಹುಟ್ಟುಹಾಕಿತ್ತೋ ಹಾಗೆ ಆಪ್​ 'ದೆಹಲಿ ಮಾದರಿ'ಯನ್ನು ಪ್ರಚಾರಕ್ಕೆ ತಂದಿತ್ತು. ಎಲ್ಲಿಯೇ ಹೋದರೂ ಅಲ್ಲಿ ಕೇಜ್ರಿವಾಲ್​ ದೆಹಲಿಯನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ. ಎಲ್ಲೆಡೆ ದೆಹಲಿ ಮಾದರಿ ಸರ್ಕಾರ ಬರಬೇಕೆಂದು ಎಂದು ಆಪ್​ ಹೇಳುತ್ತಲೇ ಇತ್ತು.

ಮೇಲಾಗಿ, ಪಂಜಾಬಿ ಜನರು ದೆಹಲಿಯನ್ನು ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಬಹುಪಾಲು ಜನರು ದೆಹಲಿಯಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಇದರ ನಡುವೆ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ಧತಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಒಂದು ವರ್ಷ ಕಾಲ ದೆಹಲಿಯಲ್ಲಿ ಪಂಜಾಬ್​ನ ರೈತರು ಆಂದೋಲನ ಕೈಗೊಂಡಿದ್ದರು. ಆಗ ದೆಹಲಿಯ ಸರ್ಕಾರ ರೈತರಿಗೆ ಬೆಂಬಲ ಸೂಚಿಸುವುದೊಂದಿಗೆ ಹೋರಾಟದ ಸ್ಥಳದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪಂಜಾಬಿಗಳು ಮನಗೆಲ್ಲುವ ಕೆಲಸ ಮಾಡಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಫಲಿಸದ ಕಾಂಗ್ರೆಸ್​ ತಂತ್ರ:ಪಂಜಾಬ್​ನಲ್ಲಿ ಆಡಳಿತಾರೂಢ ಕಾಂಗ್ರೆಸ್​ ಅಧಿಕಾರ ಉಳಿಸಿಕೊಳ್ಳಲು ನಾನಾ ತಂತ್ರಗಳನ್ನು ಮಾಡಿತ್ತು. ಚುನಾವಣೆ ಸಮೀಪಿಸುತ್ತಿದ್ದ ಹೊತ್ತಲ್ಲಿ ಪ್ರಬಲ ನಾಯಕರಾಗಿದ್ದ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಡೆ ಇಳಿಸಿತ್ತು. ಅಮರೀಂದರ್​ ಸಿಂಗ್​ ಸ್ಥಾನಕ್ಕೆ ದಲಿತ ಸಮುದಾಯದ ಚರಣ್​ಜಿತ್​ ಸಿಂಗ್​ ಚನ್ನಿ ಅವರನ್ನು ನೇಮಿಸಿತ್ತು. ಈ ಮೂಲಕ ದಲಿತರು ಸೇರಿಸಿ ಶೋಷಿತರ ಮನಗೆಲ್ಲುವ ಕರಸತ್ತು ಮಾಡಿತ್ತು.

ಆದರೆ, ಸಿಎಂ ಸ್ಥಾನ ಕಳೆದುಕೊಂಡ ಅಮರೀಂದರ್​ ಸಿಂಗ್ ಸುಮ್ಮನೆ ಕೂಡಲಿಲ್ಲ. ಕಾಂಗ್ರೆಸ್​ ವಿರುದ್ಧ ತಿರುಗಿ ಬಿದ್ದರು. ಇದರ ಜತೆಗೆ ಮೊದಲಿನಿಂದಲೂ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ನವಜೋತ್​ ಸಿಂಗ್​ ಸಿಧು ಅವರೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಿದ್ದ ಅಮರಿಂದರ್​ ಸಿಂಗ್, ಸಿಧು ವಿರುದ್ಧ ಪಾಕಿಸ್ತಾನದ ಆಸ್ತ್ರವನ್ನು ಬಿಟ್ಟರು. ಸಿಧುಗೆ ಪಾಕಿಸ್ತಾನದೊಂದಿಗೆ ನಂಟಿದೆ ಎಂದೆಲ್ಲ ಬಹಿರಂಗವಾಗಿ ಹೇಳ ತೊಡಗಿದರು. ಹೀಗಾಗಿ ಕಾಂಗ್ರೆಸ್​ ದಲಿತ ಸಿಎಂ ಆಸ್ತ್ರವನ್ನು ಮುಂದಿಟ್ಟುಕೊಂಡರೂ ಅದು ಆ ಪಕ್ಷವನ್ನು ಕೈಹಿಡಿದಿಲ್ಲ ಎಂಬುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಅಮರೀಂದರ್​ ಸಿಂಗ್​ಗೂ ಮುಖಭಂಗ:ಕಾಂಗ್ರೆಸ್​ನಿಂದ ಎರಡು ಮುಖ್ಯಮಂತ್ರಿ ಆಗಿದ್ದ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದರು. ಕಾಂಗ್ರೆಸ್​ನಿಂದ ಹೊರ ಬಂದು ಬಿಜೆಪಿಗೆ ಬೆಂಬಲಿಸಿದ್ದರು. ಅಲ್ಲದೇ, ಪಂಜಾಬ್​ ಲೋಕ ಕಾಂಗ್ರೆಸ್​ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಆದರೂ, ಅಮರೀಂದರ್​ ಸಿಂಗ್​-ಬಿಜೆಪಿಯ ಮೈತ್ರಿಯನ್ನೂ ಜನತೆ ತಿರಸ್ಕರಿಸದ್ದಾರೆ. ಸ್ವತಃ ಕ್ಯಾಪ್ಟನ್​​ ಸಿಂಗ್ ಚುನಾವಣೆಯಲ್ಲಿ ಸೋತು ಭಾರಿ ಮುಖಭಂಗ ಅನುಭವಿಸಿದ್ದಾರೆ.

ಪಕ್ಷ, ಮತ ಗಳಿಕೆ ಎಷ್ಟು?

2017ರ ವಿಧಾನಸಭೆ ಚುನಾವಣೆ

ಪಕ್ಷ ಸ್ಥಾನ ಶೇಕಡಾ ಮತ
ಕಾಂಗ್ರೆಸ್​ 77 38.5
ಆಪ್​ 20 23.7
ಅಕಾಲಿ ದಳ 15 25.2
ಬಿಜೆಪಿ 3 5.4
ಎಲ್​ಐಪಿ 2 1.2

2022ರ ವಿಧಾನಸಭೆ ಚುನಾವಣೆ

ಪಕ್ಷ ಸ್ಥಾನ ಶೇಕಡಾ ಮತ
ಕಾಂಗ್ರೆಸ್​ 18 22.9
ಆಪ್​ 92 42.0
ಅಕಾಲಿ ದಳ 03 18.4
ಬಿಜೆಪಿ 02 6.6
ಬಿಎಸ್​ಪಿ 01 1.7
Last Updated : Mar 10, 2022, 6:57 PM IST

ABOUT THE AUTHOR

...view details