ಕರ್ನಾಟಕ

karnataka

ETV Bharat / bharat

ಅರವಿಂದ್ ಕೇಜ್ರಿವಾಲ್​ ಪ್ರಧಾನಿಯಾಗ್ತಾರೆ, ಆಮ್​ ಆದ್ಮಿ ಪಕ್ಷ ಇದೀಗ ರಾಷ್ಟ್ರೀಯ ಶಕ್ತಿ ಎಂದ ಮುಖಂಡ - ಪಂಜಾಬ್ ವಿಧಾನಸಭೆ ಫಲಿತಾಂಶ

ಅತಿ ಕಡಿಮೆ ಅವಧಿಯಲ್ಲೇ ಪಂಜಾಬ್​​ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಆಮ್​ ಆದ್ಮಿ ಪಕ್ಷ ಯಶಸ್ವಿಯಾಗಿದ್ದು, ಇದೀಗ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.

AAP Raghav Chadha
AAP Raghav Chadha

By

Published : Mar 10, 2022, 11:40 AM IST

ನವದೆಹಲಿ:ಪಂಚರಾಜ್ಯ ಚುನಾವಣೆಗಳ ಪೈಕಿ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಈ ಮೂಲಕ ಕಾಂಗ್ರೆಸ್ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಕೇಸರೆರಚಾಟದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವಿಚಾರವಾಗಿ ರಾಘವ್​ ಚಡ್ಡಾ ಮಾತನಾಡಿದ್ದಾರೆ.

ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಸ್ಥಾನವನ್ನ ಇದೀಗ ಎಎಪಿ ತುಂಬುತ್ತಿದ್ದು, ಬರುವ ದಿನಗಳಲ್ಲಿ ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದಿದ್ದಾರೆ. ಪಂಜಾಬ್​ನಲ್ಲಿ ನಾವು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದು, ದಶಕಗಳಿಂದ ಇಲ್ಲಿ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳ ಗದ್ದುಗೆ ಅಲಗಾಡುತ್ತಿದೆ ಎಂದರು. ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್​​ ಬಿಜೆಪಿಗೆ ಪ್ರಮುಖ ಸವಾಲು ಆಗಲಿದ್ದು, ಅವರು ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು. ಎಎಪಿ ಇದೀಗ ಕಾಂಗ್ರೆಸ್​ ಸ್ಥಾನ ತುಂಬುತ್ತಿದೆ ಎಂದಿದ್ದಾರೆ.

ಇದನ್ನೂ ಓದಿರಿ:ಯುಪಿಯಲ್ಲಿ ಸತತ 2ನೇ ಸಲ ಅಧಿಕಾರದತ್ತ BJP.. ನಾಲ್ಕು ದಾಖಲೆ ಬರೆಯಲಿರುವ ಫೈರ್​ ಬ್ರ್ಯಾಂಡ್ ಯೋಗಿ!

ಇದೇ ವೇಳೆ ಮಾತನಾಡಿರುವ ಎಎಪಿ ಮುಖಂಡ ಮನೀಶ್ ಸಿಸೋಡಿಯಾ, ಕೇಜ್ರಿವಾಲ್​ ಮಾದರಿ ಆಡಳಿತಕ್ಕೆ ಪಂಜಾಬ್​​ ಮನಸೋತಿದ್ದು, ಆಡಳಿತ ನಡೆಸಲು ಅವಕಾಶ ನೀಡಿದೆ. ಈ ಮಾದರಿ ಬರುವ ದಿನಗಳಲ್ಲಿ ರಾಷ್ಟ್ರದ ತುಂಬೆಲ್ಲ ವಿಸ್ತರಣೆಯಾಗಲಿದೆ ಎಂದರು.

2012ರಲ್ಲಿ ಹುಟ್ಟಿಕೊಂಡಿರುವ ಆಮ್​ ಆದ್ಮಿ ಪಕ್ಷ ಮೊದಲು ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಪಂಜಾಬ್​​ನಲ್ಲೂ ಕಮಾಲ್ ಮಾಡಿದೆ.

ABOUT THE AUTHOR

...view details