ನವದೆಹಲಿ:ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ನಡುವಿನ ಗುದ್ದಾಟ ತಾರಕಕ್ಕೇರಿದೆ. ಹೌದು, ವಿದ್ಯುತ್ ಡಿಸ್ಕಾಂ ಬೋರ್ಡ್‌ಗಳಿಗೆ ನೇಮಿಸಲಾಗಿದ್ದ ಕೇಜ್ರಿವಾಲ್ ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ತೆಗೆದುಹಾಕಿದ್ದಾರೆ.
ಎಎಪಿಯ ಜಾಸ್ಮಿನ್ ಶಾ ಮತ್ತು ಸಂಸದ ಎನ್‌ಡಿ ಗುಪ್ತಾ ಅವರ ಪುತ್ರನನ್ನು ನಾಮನಿರ್ದೇಶಿತರ ಸ್ಥಾನದಿಂದ ಕಿತ್ತುಹಾಕಲಾಗಿದೆ. ನಾಮ ನಿರ್ದೇಶಿತರ ಸ್ಥಾನಗಳನ್ನು ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳೊಂದಿಗೆ ವರ್ಗಾಯಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮೂಲಗಳು ಶನಿವಾರ ತಿಳಿಸಿವೆ. ಎಎಪಿ ವಕ್ತಾರರಾದ ಜಾಸ್ಮಿನ್ ಅವರನ್ನು ಹೊರತುಪಡಿಸಿ, ಮಂಡಳಿಗಳಿಂದ ತೆಗೆದುಹಾಕಲ್ಪಟ್ಟವರಲ್ಲಿ ಎಎಪಿ ಸಂಸದ ಎನ್.ಡಿ. ಗುಪ್ತಾ ಅವರ ಪುತ್ರ ನವೀನ್ ಗುಪ್ತಾ ಮತ್ತು ಇತರ ಖಾಸಗಿ ವ್ಯಕ್ತಿಗಳನ್ನು ಸರ್ಕಾರದಿಂದ ನಾಮ ನಿರ್ದೇಶಿತರಾಗಿ ನೇಮಕಗೊಂಡಿರುವುದು ಕಾನೂನು ಬಾಹಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಬಾಹಿರವಾಗಿ ನೇಮಕ: ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಶಾ ಮತ್ತು ಗುಪ್ತಾರನ್ನು ವಿದ್ಯುತ್ ಡಿಸ್ಕಾಂ ಮಂಡಳಿಗಳಿಂದ ತೆಗೆದುಹಾಕುವ ಲೆಫ್ಟಿನೆಂಟ್ ಗವರ್ನರ್ ಆದೇಶ "ಕಾನೂನುಬಾಹಿರ ಮತ್ತು ಅಸಂವಿಧಾನಿಕ" ಎಂದು ಬಣ್ಣಿಸಿದೆ. ಅಂತಹ ಆದೇಶ ಹೊರಡಿಸುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ಗೆ ಇಲ್ಲ ಎಂದು ಆಪ್ ಪಕ್ಷ ಹೇಳಿದೆ.
ಹಣಕಾಸು ಕಾರ್ಯದರ್ಶಿ, ಪವರ್ ಸೆಕ್ರೆಟರಿ ಮತ್ತು ದೆಹಲಿ ಟ್ರಾನ್ಸಕೊ ಎಂಡಿ ಈಗಿನ ಪರಿಸ್ಥಿತಿಗೆ ತಕ್ಕಂತೆ ಡಿಸ್ಕಾಂ ಮಂಡಳಿಗಳಲ್ಲಿ ನಗರ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಬಿವೈಪಿಎಲ್, ಬಿಆರ್ಪಿಎಲ್ ಹಾಗೂ ಟಿಪಿಡಿಡಿಎಲ್ ಮಂಡಳಿಗಳಿಗೆ ಸರ್ಕಾರಿ ನಾಮನಿರ್ದೇಶಿತರಾಗಿ "ಕಾನೂನು ಬಾಹಿರವಾಗಿ" ನೇಮಕಗೊಂಡಿರುವ ಷಾ, ಗುಪ್ತಾ ಮತ್ತು ಇತರ ಖಾಸಗಿ ವ್ಯಕ್ತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದೆ ಎಂದು ಎಂದು ಎಲ್‌ಜಿ ಕಚೇರಿಯ ಮೂಲಗಳು ತಿಳಿಸಿದೆ.
ಸುಪ್ರೀಂ ಕೋರ್ಟ್ ಆದೇಶ ಅಪಹಾಸ್ಯ: ''ಚುನಾಯಿತ ಸರ್ಕಾರಕ್ಕೆ ಮಾತ್ರ ವಿದ್ಯುತ್ ವಿಷಯದ ಕುರಿತು ಆದೇಶಗಳನ್ನು ಹೊರಡಿಸುವ ಅಧಿಕಾರವಿದೆ'' ಎಂದು ಎಎಪಿ ಹೇಳಿದೆ. " ಲೆಫ್ಟಿನೆಂಟ್ ಗವರ್ನರ್ ಅವರು, ಸುಪ್ರೀಂಕೋರ್ಟ್ ಆದೇಶಗಳನ್ನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅಪಹಾಸ್ಯ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಗಳು ಅವರು ಬದ್ಧವಾಗಿಲ್ಲವೆಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ" ಎಂದು ಪಕ್ಷವು ಅಸಮಾಧಾನ ವ್ಯಕ್ತಪಡಿಸಿದೆ.