ನವ ದೆಹಲಿ:ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ತೃತೀಯ ಲಿಂಗಿ ಅಭ್ಯರ್ಥಿ ಬಾಬಿ ಕಿನ್ನರ್ ಗೆಲುವು ಸಾಧಿಸಿದ್ದಾರೆ. ಇವರು ಪಾಲಿಕೆ ಚುನಾವಣೆಯಲ್ಲಿ ಗೆದ್ದ ಮೊದಲ ತೃತೀಯ ಲಿಂಗಿ ಅಭ್ಯರ್ಥಿ ಕೂಡಾ ಹೌದು. 38 ವರ್ಷದ ಬಾಬಿ ಕಿನ್ನರ್ 'ಹಿಂದೂ ಯುವ ಸಮಾಜ ಏಕತಾ ಅವಾಮ್ ಭಯೋತ್ಪಾದನಾ ವಿರೋಧಿ ಸಮಿತಿ'ಯ ದೆಹಲಿ ಘಟಕದ ಅಧ್ಯಕ್ಷರಾಗಿದ್ದಾರೆ. ಲೋಕಪಾಲ್‌ಗಾಗಿ ಅಣ್ಣಾ ಹಜಾರೆ ನಡೆಸುತ್ತಿದ್ದ ಆಂದೋಲನದ ಸಂದರ್ಭದಲ್ಲೂ ಬಾಬಿ ಕ್ರಿಯಾಶೀಲರಾಗಿದ್ದರು.
ಎಸ್‌ಸಿ ಮಹಿಳೆಯರಿಗೆ ಮೀಸಲಾಗಿದ್ದ 43ನೇ ವಾರ್ಡ್ ಸುಲ್ತಾನ್‌ಪುರಿ-ಎಯಿಂದ ಬಾಬಿ ಕಿನ್ನರ್‌ಗೆ ಟಿಕೆಟ್ ನೀಡಲಾಗಿತ್ತು. 2017ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.