ಕರ್ನಾಟಕ

karnataka

ETV Bharat / bharat

ಮಾ.​​16ರಂದು ಸಿಎಂ ಆಗಿ ಭಗವಂತ್ ಮನ್​ ಪದಗ್ರಹಣ: ಅಮೃತಸರದಲ್ಲಿ ಬೃಹತ್ ರೋಡ್​ ಶೋಗೆ ಸಿದ್ಧತೆ - ಮಾರ್ಚ್​ 16ರಂದು ನೂತನ ಸಿಎಂ ಆಗಿ ಭಗವಂತ್ ಅಧಿಕಾರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ ಅವರನ್ನು ಇಂದು ಭೇಟಿ ಮಾಡಿ ಮಾಡಿರುವ ಪಂಜಾಬ್‌ನ ನಿಯೋಜಿತ ಸಿಎಂ ಭಗವಂತ್‌ ಮನ್‌, ಮಾರ್ಚ್​​ 16ರಂದು ನಡೆಯಲಿರುವ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

Bhagwant Mann to take oath on March 16
Bhagwant Mann to take oath on March 16

By

Published : Mar 11, 2022, 4:46 PM IST

ನವದೆಹಲಿ:92 ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಪಂಜಾಬ್​​ನಲ್ಲಿ ಆಪ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೀಗ ನೂತನ ಸರ್ಕಾರ ರಚನೆ ಮಾಡಲು ನಿಯೋಜಿತ ಸಿಎಂ ಭಗವಂತ್‌ ಮನ್‌ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ.

ದೆಹಲಿಯಲ್ಲಿಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ಹಾಗೂ ಮನೀಷ್ ಸಿಸೋಡಿಯಾ ಅವರನ್ನು ಭೇಟಿ ಮಾಡಿರುವ ಭಗವಂತ್ ಮನ್​​ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಇಂದು ಸಂಜೆ ಚಂಡೀಗಢನಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಎಎಸಿ ಶಾಸಕರು ಭಗವಂತ್ ಮನ್​ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಇದಾದ ಬಳಿಕ ಮಾರ್ಚ್​​ 13ರಂದು ಅಮೃತ​ಸರದಲ್ಲಿ ಬೃಹತ್ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಅರವಿಂದ್ ಕೇಜ್ರಿವಾಲ್​​ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಕೇಜ್ರಿವಾಲ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪಂಜಾಬ್‌ ನಿಯೋಜಿತ ಸಿಎಂ ಭಗವಂತ್‌ ಮನ್‌!

ಈ ಸಂದರ್ಭದಲ್ಲಿ ಮಾತನಾಡಿರುವ ನೂತನ ಎಎಪಿ ಶಾಸಕ ಗುರುದೇವ್​​ ಸಿಂಗ್ ದೇವ್ ಮನ್​, ಪಂಜಾಬ್ ಜನರ ಭರವಸೆ ಈಡೇರಿಸುತ್ತೇವೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಪಂಜಾಬ್​​ ರಾಜ್ಯವನ್ನು ಭ್ರಷ್ಟಾಚಾರ ಮತ್ತು ಮಾದಕ ವ್ಯಸನದಿಂದ ಮುಕ್ತಗೊಳಿಸುತ್ತೇವೆ. ಪ್ರತಿ ಕುಟುಂಬ ಸದಸ್ಯರಿಗೂ ಉದ್ಯೋಗ ಒದಗಿಸುವುದು ನಮ್ಮ ಗುರಿ ಎಂದರು.

ABOUT THE AUTHOR

...view details