ಕರ್ನಾಟಕ

karnataka

ETV Bharat / bharat

Pegasus spyware: ಎಲ್ಲಾ ರಾಜ್ಯಗಳಲ್ಲೂ ನಾಳೆ ಕಾಂಗ್ರೆಸ್ ಸುದ್ದಿಗೋಷ್ಠಿ.. ಇಂದು ಪಿಎಂ ನೇತೃತ್ವದಲ್ಲಿ ಸಂಸದೀಯ ಪಕ್ಷದ ಸಭೆ!

ಪೆಗಾಸಸ್​ ಕಣ್ಗಾವಲು ತಂತ್ರಾಂಶ ದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಹಿನ್ನೆಲೆ ನಾಳೆ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್​ ಸುದ್ದಿಗೋಷ್ಠಿ ನಡೆಸಲಿದ್ದು, ರಾಜಭವನ ಚಲೋ ಹಮ್ಮಿಕೊಂಡಿವೆ.

ಕಾಂಗ್ರೆಸ್ ಸುದ್ದಿಗೋಷ್ಠಿ
ಕಾಂಗ್ರೆಸ್ ಸುದ್ದಿಗೋಷ್ಠಿ

By

Published : Jul 20, 2021, 9:29 AM IST

Updated : Jul 20, 2021, 11:08 AM IST

ನವದೆಹಲಿ:ರಾಷ್ಟ್ರ ರಾಜಕಾರಣದಲ್ಲಿ ಪೆಗಾಸಸ್ ಕಣ್ಗಾವಲು ತಂತ್ರಾಂಶ ವಿವಾದ ಭಾರಿ ಸದ್ದು ಮಾಡ್ತಿದೆ. ನಿನ್ನೆ ನಡೆದ ಸಂಸತ್ತು ಕಲಾಪದಲ್ಲೂ ವಿಪಕ್ಷಗಳು ಈ ಬಗ್ಗೆ ದನಿ ಎತ್ತಿದ್ದು, ಚರ್ಚೆಗೆ ಅಡ್ಡಿಪಡಿಸಿದ್ದವು.

ಕೇಂದ್ರ ಸರ್ಕಾರದಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆ ನಾಳೆ (ಜುಲೈ 22) ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್ ರಾಜ್ಯ ಘಟಕಗಳು ಸುದ್ದಿಗೋಷ್ಠಿ ನಡೆಸಲಿವೆ. ಬಳಿಕ ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಜಭವನ ಚಲೋ ಹಮ್ಮಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ

ಇದನ್ನೂ ಓದಿ : ಪೆಗಾಸಸ್​... ಏನಿದು ವಿವಾದ, ಯಾರೆಲ್ಲ ಟಾರ್ಗೆಟ್?

ಕಾಂಗ್ರೆಸ್​ನಿಂದ ಮುಂದೂಡಿಕೆ ನೋಟಿಸ್

ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್​, ಪೆಗಾಸಸ್ ವಿವಾದ ಕುರಿತು ಲೋಕಸಭೆ ಶೂನ್ಯ ವೇಳೆಯಲ್ಲಿ ನಿಲುವಳಿ ಸೂಚನೆ ನೋಟಿಸ್​ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ:ಪೆಗಾಸಸ್ ವಿವಾದ: ಕಣ್ಗಾವಲು ಪಟ್ಟಿಯಲ್ಲಿತ್ತಂತೆ ಪಾಕ್​ ಪ್ರಧಾನಿ ಇಮ್ರಾನ್ ಖಾನ್​​ ನಂಬರ್​

ಆಪ್​ನಿಂದಲೂ ಶೂನ್ಯವೇಳೆ ನೋಟಿಸ್

ಪೆಗಾಸಸ್ ವಿವಾದ​ ಕುರಿತು ಆಪ್​ ಸಂಸದ ಸಂಜಯ್ ಸಿಂಗ್​​ ಝೀರೋ ಅವರ (ಶೂನ್ಯವೇಳೆ) ನೋಟಿಸ್ ನೀಡಿದ್ದಾರೆ. ಪೆಗಾಸಸ್ ಸ್ಪೈವೇರ್​ ಬಗ್ಗೆ ಮಾಹಿತಿ ಬಹಿರಂಗ ಪಡಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರಿ ಸೆಟ್ಟಿಂಗ್, ರಿ ಬೂಟಿಂಗ್ ಮೂಲಕ 'ಪೆಗಾಸಸ್' ಸ್ಪೈವೇರ್ ಅಳಿಸಿ ಹಾಕಲು ಸಾಧ್ಯವಿಲ್ಲ

ವಿಪಕ್ಷಗಳ ಪ್ರಶ್ನೆಗೆ ವೈಷ್ಣವ್​ ಉತ್ತರ

ಪೆಗಾಸಸ್ ಕುರಿತು ವಿಪಕ್ಷಗಳು ಎತ್ತಿರುವ ಪ್ರಶ್ನೆಗೆ ಸಂಸತ್​ನಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್​​ ಉತ್ತರ ನೀಡಲಿದ್ದಾರೆ.

ಪ್ರಧಾನಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ

ಪೆಗಾಸಸ್ ಕಣ್ಗಾವಲು ತಂತ್ರಾಂಶದ ಬಗ್ಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆ, ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಲಿದೆ. ವಿವಾದದ ಕುರಿತು ಎಲ್ಲರ ಸಮ್ಮುಖದಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

Last Updated : Jul 20, 2021, 11:08 AM IST

ABOUT THE AUTHOR

...view details